






ನಿಡ್ಪಳ್ಳಿ;ನಿಡ್ಪಳ್ಳಿ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಆರನೇ ದಿನವಾದ ಮೆ.20 ರಂದು ಮಕ್ಕಳಿಗೆ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜನಾರ್ಧನ ದುರ್ಗ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿಯ ಶಿಕ್ಷಕಿ ಶೋಭಾರವರು ಹಾಡು ರಚನೆ, ಪೆನ್ ಸ್ಟ್ಯಾಂಡ್ ಕ್ರಾಫ್ಟ್ ಹಾಗೂ ಕೆಲವು ಚಟುವಟಿಕೆಗಳನ್ನು ನಡೆಸಿದರು.ಸುಮಾರು 40 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.


ಗ್ರಂಥ ಪಾಲಕಿ ಪವಿತ್ರ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ, ಸಿಬ್ಬಂದಿ ಜಯ ಕುಮಾರಿ, ಪಶುಸಖಿ ತೇಜಸ್ವಿನಿ ಉಪಸ್ಥಿತರಿದ್ದರು. ಲಘು ಉಪಹಾರದ ವ್ಯವಸ್ಥೆಯನ್ನು ಪಂಚಾಯತ್ ಸಿಬ್ಬಂದಿ ರೇವತಿ ಹಾಗೂ ಸಂಜೀವಿನಿ ಸಂಘದ ಮುಖ್ಯ ಪುಸ್ತಕ ಬರಹಗಾರ್ತಿ ಭವ್ಯ ನೀಡಿದರು.













