ನಿಡ್ಪಳ್ಳಿ: 22ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ – ಒಕ್ಕೂಟದ ಪದಗ್ರಹಣದ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಿಡ್ಪಳ್ಳಿ, ಶ್ರೀ ಶಾಂತದುರ್ಗಾ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿಡ್ಪಳ್ಳಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಜೂನ್ 6ರಂದು ಶ್ರೀ ಶಾಂತದುರ್ಗಾ ದೇವಸ್ಥಾನ, ಶ್ರೀ ಕ್ಷೇತ್ರ ನಿಡ್ಪಳ್ಳಿಯಲ್ಲಿ ನಡೆಯಲಿರುವ 22ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನಿಡ್ಪಳ್ಳಿ ಒಕ್ಕೂಟದ ಪದಗ್ರಹಣ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಮೇ 24ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಹಾಗೂ ಸಿ.ಎ. ಬ್ಯಾಂಕ್ ಪಾಣಾಜೆ ನಿವೃತ್ತ ಸಿಬ್ಬಂದಿ ಪದ್ಮನಾಭ ಕುಲಾಲ್ ಗುರಿ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರ ಸಹಾಯಕ ವಿಶ್ವೇಶ್ವರ ಭಟ್ ಮುಂಡೂರು, ಯೋಜನೆಯ ಬೆಟ್ಟಂಪಾಡಿ ವಲಯದ ಮೇಲ್ವಿಚಾರಕ ಆದರ್ಶ್, ಪೂಜಾ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಪಾಟಾಳಿ, ಅಧ್ಯಕ್ಷೆ ಸುನೀತಾ ರೈ, ಗೌರವ ಸಲಹೆಗಾರ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ರೈ, ಸಂಚಾಲಕ ಗಂಗಾಧರ ಸಿ.ಎಚ್, ಕಾರ್ಯದರ್ಶಿ ಹರಿಪ್ರಸಾದ್ ಸಿ.ಎಚ್, ಕೋಶಾಧಿಕಾರಿ ಸುಗುಣ, ನೂತನ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಕೆ., ಸೇವಾ ಪ್ರತಿನಿಧಿ ಶಾಲಿನಿ ಕೆ., ಸದಸ್ಯರಾದ ನವನೀತ, ಪವಿತ್ರಾ, ಯೋಗೀಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here