ಮುಂಡೋಳೆ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮದ ಮುಂಡೋಳೆ ಬದ್ರಿಯಾ ಜುಮಾ‌ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸ್ಥಳೀಯ ಖತೀಬ್ ಯಾಸಿರ್ ಅರಫಾತ್ ಯಮಾನಿ ಅರಿಕ್ಕಾಡಿ ಅವರು ನಮಾಜ್ ಹಾಗೂ ಖುತುಬಾಗೆ ನೇತೃತ್ವ ನೀಡಿದರು.


ಈ ಸಂದರ್ಭದಲ್ಲಿ ಊರ ಹಿರಿಯರು, ಯುವಕರು ಪುಟಾಣಿಗಳು ಪಾಲ್ಗೊಂಡು ಪರಸ್ಪರ ಹಸ್ತಲಾಘವ, ಆಲಿಂಗನ ಮಾಡಿ ಸಂಭ್ರಮವನ್ನು ಹಂಚಿಕೊಂಡರು. ನಂತರ ಸಾಮೂಹಿಕ ಖಬರ್ ಝಿಯಾರತ್ ಹಾಗೂ ಪ್ರಾರ್ಥನೆ ನಡೆಯಿತು. ಮನೆ ಮನೆಗಳಿಗೆ ಭೇಟಿ ಈದ್ ಸಂದೇಶವನ್ನು ರವಾನಿಸಲಾಯಿತು.

LEAVE A REPLY

Please enter your comment!
Please enter your name here