






ಕಾವು: ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜೂನ್ 1 2026 ರಂದು ನಡೆಸಲಾಯಿತು.


ಬೆಳಿಗ್ಗೆ ಶಾಲಾ ದ್ವಾರದ ಮುಖಾಂತರ ವಿದ್ಯಾರ್ಥಿಗಳನ್ನು ಅತಿಥಿಗಳನ್ನು ಮೆರವಣಿಗೆ ಮೂಲಕ ಬ್ಯಾಂಡ್ ಸೆಟ್ ನೊಂದಿಗೆ ಶಾಲಾ ಅಡಿಟೋರಿಯಂಗೆ ಕರೆದುಕೊಂಡು ಹೋಗಲಾಯಿತು.



ಮೆರವಣಿಗೆ ಬಳಿಕ ಸಭಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಅಬ್ದುಲ್ ಅಜೀಜ್,ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ಹೀರಾ ಅಬ್ದುಲ್ ಖಾದರ್, ಶಾಲಾ ಮುಖ್ಯ ಗುರುಗಳಾದ ದೀಪಿಕಾ ಚಾಕೋಟೆ, ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಖಜಾಂಜಿಯಾದ ರವಿರಾಜ್ ಭೋರ್ಕರ್,ಸದಸ್ಯರುಗಳಾದ ರವಿಪ್ರಸಾದ್ ರೈ, ಶಾಲಾ ಆಡಳಿತ ಸಂಯೋಜಕ ಇಮ್ತಿಯಾಜ್ ಸಿಎಂ,ಶಾಲಾ ಶೈಕ್ಷಣಿಕ ಸಲಹೆಗಾರ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಗಣ್ಯರನ್ನು ಶಾಲಾ ಮುಖ್ಯ ಗುರುಗಳಾದ ದೀಪಿಕಾ ಚಾಕೋಟೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಗಣಿತ ಶಿಕ್ಷಕ ಪ್ರದೀಪ್ ಕುಮಾರ್ ಎ. ಆರ್ ವಂದಿಸಿದರು.










