






ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವವು ಸಡಗರ ಮತ್ತು ಸಂಭ್ರಮದಿಂದ ನಡೆಯಿತು.


ಮುಖ್ಯದ್ವಾರವು ಬಾಳೆಗಿಡ ಮತ್ತು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದು ಶಾಲಾ ಸಂಚಾಲಕರು ರಿಬ್ಬನ್ ಕತ್ತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಸಂಸ್ಥೆಯ ಶಿಕ್ಷಕಿಯರಾದ ಸುಚೇತ, ಜಯಶೀಲ, ಶರ್ಮಿಳ, ರಚನ, ಸೌಮ್ಯ ರೈ, ಸವಿತಾ ಎಸ್, ಸುವರ್ಣ, ಕವಿತಾ ಎಚ್ ರೈ ಸ್ಕೌಟ್ ಗೇಟ್ಸ್ ಟೀಚರ್ಸ್ ಬ್ಯಾಂಡ್ ಸೆಟ್ ನೊಂದಿಗೆ ಮಕ್ಕಳನ್ನು ಸಭಾಂಗಣಕ್ಕೆ ಬರಮಾಡಿಕೊಂಡರು. ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ದೀಪ ಬೆಳಗಿಸಿ ಶಾರದಾ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.



ಎಲ್ಲ ಶಿಕ್ಷಕ ವೃಂದದವರು ಆರತಿ ಎತ್ತಿ ತಿಲಕವನಿಟ್ಟು ಮಕ್ಕಳಿಗೆ ಶುಭವನ್ನು ಕೋರಿದರು . ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ದಿವಿಶ್ ಮುರುಳ್ಯ, ಪೋಷಕ ಬಂಧು ಧನಂಜಯ ಕೇನಾಜೆ ಶುಭ ನುಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ , ಸಹ ಆಡಳಿತ ಅಧಿಕಾರಿ ಹೇಮಾನಾಗೇಶ್ ರೈ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ಉಪಸ್ಥಿತರಿದ್ದರು. ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಸ್ವಾಗತಿಸಿ, ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕವೃಂದದವರು ಹಾಡಿನ ಮೂಲಕ ಶುಭ ಹಾರೈಸಿದರು. ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನನ್ನು ನೀಡಿ ಸಂಸ್ಥೆಗೆ ಸ್ವಾಗತಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಕವಿತಾ ವಿ ರೈ, ಚಿತ್ರಕಲಾ ಎಂ , ಸಂತೋಷ್ ಕೆ, ಪ್ರತಿಭಾ, ಕವಿತಾ ಎಚ್ ರೈ ಉತ್ತಮ ರೀತಿಯಲ್ಲಿ ಸಂಘಟಿಸಿದರು. ಮಧ್ಯಾಹ್ನ ಮಕ್ಕಳಿಗೆ ಪಾಯಸದ ಊಟವನ್ನು ನೀಡಲಾಯಿತು.










