






ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಏರ್ ವಿಂಗ್ ಎನ್‌ಸಿಸಿ ಕಾರ್ಯಾಚರಿಸುತ್ತಿದ್ದು, 2026ರ ಜೂನ್ 1 ರಿಂದ ಜೂನ್ 10ರ ತನಕ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ಪ್ರಥಮ ಹಂತದ ತರಬೇತಿಯಲ್ಲಿ ಪಾಲ್ಗೊಳ್ಳಲು 50 ಕೆಡೆಟ್‌ಗಳು ತೆರಳಿದ್ದಾರೆ.


ಎಎನ್‌ಓ ಆಫೀಸರ್ ಅಜಿತ್ ಅವರ ನೇತೃತ್ವದಲ್ಲಿ ತೆರಳುತ್ತಿರುವ ಕೆಡೆಟ್‌ಗಳಿಗೆ ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ದಂಬೆಕ್ಕಾನ ಸದಾಶಿವ ರೈ, ದಯಾನಂದ ರೈ ಮನವಳಿಕೆಗುತ್ತು, ಜಯಪ್ರಕಾಶ್ ರೈ ನೂಜಿಬೈಲು, ನಿತ್ಯಾನಂದ ಶೆಟ್ಟಿ ನೆಲ್ಯಾಡಿ, ದಯಾನಂದ ರೈ ಕೋರ್ಮಂಡ, ವತ್ಸಲಾ ಪಿ. ಶೆಟ್ಟಿ ಶುಭ ಹಾರೈಸಿ ಬೀಳ್ಕೊಟ್ಟರು.













