ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ದ್ವಿ.ದ.ಸಹಾಯಕಿ ಐರಿನ್ ಮರಿಯ ಕುಟಿನ್ಹಾ ಸೇವಾ ನಿವೃತ್ತಿ

0

ಪುತ್ತೂರು: ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ, ಚರ್ಚ್ ವಠಾರದಲ್ಲಿರುವ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕಿ ಐರಿನ್ ಮರಿಯ ಕುಟಿನ್ಹಾರವರು ಮೇ31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.


ಬಂಟ್ವಾಳ ತಾಲೂಕಿನ ನಯನಾಡು ಗ್ರಾಮದ ದಿ|ಜಾನ್ ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ದಿ|ಆಲಿಸ್ ರೊಡ್ರಿಗಸ್‌ರವರ ಪುತ್ರಿಯಾದ ಐರಿನ್ ಮರಿಯ ಕುಟಿನ್ಹಾರವರು ಬಂಟ್ವಾಳ ಸಂತ ಜೋಸೆಫರ ಪ್ರಾಥಮಿಕ ಶಾಲೆ, ಪುಂಜಾಲಕಟ್ಟೆ ಸರಕಾರಿ ಪ್ರೌಢಶಾಲೆ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು, ಶಿರ್ವ ಸಂತ ಮೇರಿಸ್ ಪದವಿ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ವಿವಿಧ ಕಡೆ ಟೈಪಿಂಗ್ ಇನ್‌ಸ್ಟ್ರಕ್ಟರ್, ರಿಸೆಪ್ಷನಿಸ್ಟ್, ಸ್ಟೆನೋಗ್ರಾಫರ್ ಮುಂತಾದ ಕೆಲಸ ನಿರ್ವಹಿಸಿದ್ದರು. ಬಳಿಕ 03-10-1997ರಂದು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯಕ್ಕೆ ಸೇರಿ ಒಟ್ಟು 28 ವರ್ಷ, 7 ತಿಂಗಳು, 28 ದಿನಗಳ ಕಾಲ ದ್ವಿತೀಯ ದರ್ಜೆ ಸಹಾಯಕಿ ಹಾಗೂ ಕಛೇರಿ ನಿರ್ವಾಹಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ಇವರು ಪತಿ ಜೋಸೆಫ್ ಕುಟಿನ್ಹಾ, ಪುತ್ರ, ಮರೈನ್ ಇಂಜಿನಿಯರ್ ಜೇಮ್ಸ್ ಕುಟಿನ್ಹಾ, ಕೆಇಬಿಯಲ್ಲಿ ಎಕೌಂಟೆಂಟ್ ಆಗಿರುವ ಸೊಸೆ ಶೌಲಿನ್ ಲೋಪೆಸ್ ಹಾಗೂ ಪುತ್ರಿ, ಎಂಎಸ್‌ಸಿ ವಿದ್ಯಾರ್ಥಿನಿ ರಾಜ್ಯ ಪುರಸ್ಕಾರ ಗೈಡ್ ಜೀನ್ ಕುಟಿನ್ಹಾರವರೊಂದಿಗೆ ಮರೀಲ್‌ನಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here