






ಮುಖ್ಯ ಮಂತ್ರಿಯಾಗಿ ಆಯಿಷತ್ ತಶ್ರೀಫಾ.ಎ.ಬಿ, ಉಪ ಮುಖ್ಯ ಮಂತ್ರಿಯಾಗಿ ಅಶ್ವಿತ್.ಎನ್ ಆಯ್ಕೆ.


ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು ಬೆಟ್ಟಂಪಾಡಿ ಇಲ್ಲಿಯ 2026-27 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.ಮುಖ್ಯ ಮಂತ್ರಿಯಾಗಿ ಆಯಿಷತ್ ತಶ್ರೀಫಾ ಎ.ಬಿ, ಉಪ ಮುಖ್ಯ ಮಂತ್ರಿಯಾಗಿ ಅಶ್ವಿತ್. ಎನ್ ಆಯ್ಕೆಯಾದರು.



ವಿರೋಧ ಪಕ್ಷದ ನಾಯಕ ಮೊಹಮ್ಮದ್ ಅದೀಚ್, ವಿರೋಧ ಪಕ್ಷದ ನಾಯಕಿ ಫಾತಿಮತ್ ಅರಬ್ ಮಿಯಾ, ಶಿಕ್ಷಣ ಮಂತ್ರಿಯಾಗಿ ಯಕ್ಷೀತಾ.ಎ, ಉಪ ಶಿಕ್ಷಣ ಮಂತ್ರಿಯಾಗಿ ಆಯಿಷತ್ ತಶ್ರೀಫಾ ಎ.ಬಿ, ಅರೋಗ್ಯ ಮಂತ್ರಿಯಾಗಿ ಫಾತಿಮತ್ ಶೆಬೀಬಾ, ಉಪ ಆರೋಗ್ಯ ಮಂತ್ರಿಯಾಗಿ ಹೃತಿಕಾ.ಕೆ, ಸ್ವಚ್ಚತಾ ಮಂತ್ರಿಯಾಗಿ ದೀಪಶ್ರೀ, ಉಪ ಸ್ವಚ್ಚತಾ ಮಂತ್ರಿಯಾಗಿ ಮೊಹಮ್ಮದ್ ಶಾಫಿ, ಮೊಹಮ್ಮದ್ ಅಜ್ಮಲ್, ಕೃಷಿ ಮಂತ್ರಿಯಾಗಿ ಮುಹಮ್ಮದ್, ಉಪ ಕೃಷಿ ಮಂತ್ರಿಯಾಗಿ ಅದ್ವೈತ್, ಸಾಂಸ್ಕೃತಿಕ ಮಂತ್ರಿಯಾಗಿ ಈಶ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಹಿತಾಶ್ರೀ ಪಿ.ಎಸ್, ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ತನ್ವೀರ್, ಉಪ ಅಬ್ದುಲ್ ಘನಿ ಅಹ್ಮದ್, ನೀರಾವರಿ ಮಂತ್ರಿಯಾಗಿ ಮಹಮ್ಮದ್ ಸಮ್ಮಾಸ, ಉಪ ಮಹಮ್ಮದ್ ಶಾರಿಫಿಮ್, ಗೃಹ ಮಂತ್ರಿಯಾಗಿ ಫಾತಿಮಾ ಸನಾ, ಉಪ ಗೃಹ ಮಂತ್ರಿಯಾಗಿ ನೆಫೀಸತ್ ರಿಫ, ಆಹಾರ ಮಂತ್ರಿಯಾಗಿ ಫಾತಿಮತ್ ಸನಾ,ಉಪ ಆಹಾರ ಮಂತ್ರಿಯಾಗಿ ಬಿಂದಿಯಾ ರೈ, ಶಮೀಮಾ ಇವರನ್ನು ಆರಿಸಲಾಯಿತು.
ಮುಖ್ಯ ಶಿಕ್ಷಕಿ ಪಾರ್ವತಿ ಕಜೆ ಇವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕಿಯರಾದ ಸುನೀತಾ,ಸೌಮ್ಯ, ಅತಿಥಿ ಶಿಕ್ಷಕಿ ರವಿಕಲಾ, ಗೌರವ ಶಿಕ್ಷಕಿ ಮಮತಾ ಸಹಕರಿಸಿದರು.










