ಬೊಳುವಾರು ಭಾಗೀರಥಿ ನಿಧನ

0

ಪುತ್ತೂರು: ಪುತ್ತೂರು ವಾಣಿ ಪ್ರಿಂಟರ್ಸ್ ಮಾಲಕರಾಗಿದ್ದ ದಿ.ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ ( 81 ವ) ಅವರು ಜೂ.17 ರ ತಡ ರಾತ್ರಿ ಗಂ.12.15 ಕ್ಕೆ ನಿಧನರಾದರು.

ಬೊಳುವಾರು ನಿವಾಸಿಯಾಗಿದ್ದ ಭಾಗೀರಥಿ ಅವರು ಅನಾರೋಗ್ಯದಿಂದ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂಧಿಸದೆ ಅವರು ನಿಧನರಾಗಿದ್ದರೆ. ಮೃತರು ಪುತ್ರರಾದ ನಮ್ಮ ಪುತ್ತೂರು ಯು ಟ್ಯೂಬ್ ಚಾನೆಲ್ ನ ಪ್ರವೀಣ್, ವಾಣಿ ಪ್ರಿಂಟರ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿರುವ ನೀಲಂತ್, ಪುತ್ರಿ ಬೆಂಗಳೂರಿನಲ್ಲಿರುವ ಡಾ.ವಾಣಿ ಮತ್ತು ಸೊಸೆಯಂದಿರಾದ ಅಶ್ವಿನಿ ಪ್ರವೀಣ್, ಜ್ಯೋತಿ ನೀಲಂತ್, ಅಳಿಯ ಅನಂತ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here