ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ, ಶ್ರೀ ವ್ಯಾಘ್ರ ಚಾಮುಂಡಿ (ರಾಜನ್ ದೈವ) ದೈವಸ್ಥಾನಕ್ಕೆ ನೂತನ ಕೊಡಿಮರ ಸಮರ್ಪಣೆ : ಕೊಡಿಮರ ಮುಹೂರ್ತ

0

ಬಡಗನ್ನೂರು: ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ, ಶ್ರೀ ವ್ಯಾಘ್ರ ಚಾಮುಂಡಿ (ರಾಜನ್ ದೈವ) ದೈವಸ್ಥಾನಕ್ಕೆ ನೂತನ ಕೊಡಿಮರ ಕಡಿಯುವ ಕಾರ್ಯಕ್ರಮವು ಜೂ.18 ರಂದು ಚಂದುಕೂಡ್ಲು ಶ್ರೀನಿವಾಸ ಭಟ್ ಅವರ ಪರಿಸರದಲ್ಲಿ ನಡೆಯಿತು.

ಬೆಳಗ್ಗೆ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳು ಆಗಮಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿ ಆಶೀರ್ವದಿಸಿದರು. ಬಳಿಕ ವೇದಮೂರ್ತಿ ಬನ್ನೂರು ಗಣೇಶ ಭಟ್ ನೇತೃತ್ವದಲ್ಲಿ ಭೂಮಿ ಪೂಜೆ ಹಾಗೂ ವೃಕ್ಷ ಪೂಜೆ ನಡೆಯಿತು. ವಿಶ್ವಕರ್ಮಿ ನಾರಾಯಣ ಆಚಾರ್ಯ ಮತ್ತು ಶಿಲ್ಪ ತಜ್ಞ ಗಂಗಾಧರ ಆಚಾರ್ಯ ನೇತೃತ್ವದಲ್ಲಿ ಮರ ಕಡಿಯುವ ಮುಹೂರ್ತ ನೆರವೇರಿತು. ಕೊಡಿಮರವನ್ನು ಲಾರಿಯ ಮೇಲೆ ಹೂವಿನಿಂದ ಅಲಂಕರಿಸಿ ಚಂದುಕೂಡ್ಲು ಶ್ರೀನಿವಾಸ ಭಟ್ ಮತ್ತು ವೀಣಾ ಶ್ರೀನಿವಾಸ ಭಟ್ ದಂಪತಿ ಆರತಿ ಬೆಳಗಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಬ್ಯಾಂಡ್ ವಾದ್ಯದೊಂದಿಗೆ ಚಂದುಕೂಡ್ಲು ಮನೆಯಿಂದ ತಲೆಂಜಿ, ಕೊಲ, ಮೈಂದನಡ್ಕ ಮಾರ್ಗವಾಗಿ ಪಡುಮಲೆ ಬದಿನಾರು ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ಸಾಗಿಸಲಾಯಿತು.ದೈವಸ್ಥಾನದಲ್ಲಿ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ದೈವಗಳಿಗೆ ವಿಶೇಷ ಮಂಗಳಾರತಿ, ನೂತನ ಕೊಡಿಮರಕ್ಕೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕೊಡಿಮರವನ್ನು ಕ್ಷೇತ್ರದಲ್ಲಿ ಇರಿಸಿ ಮುಂದಿನ ಕಾರ್ಯಗಳು ಶೀಘ್ರವಾಗಿ ನಡೆಯುವಂತೆ ಪ್ರಾರ್ಥಿಸಲಾಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಸತೀಶ್ ರೖೆ ಕಟ್ಟಾವು,  ಮಾಜಿ ಅಧ್ಯಕ್ಷ ಮನೋಜ್ ರೖೆ ಪೇರಾಲು,  ಶ್ರೀ ಪೂಮಾಣಿ ಕಿನ್ನಿಮಾಣಿ, ಶ್ರೀ ವ್ಯಾಘ್ರ ಚಾಮುಂಡಿ (ರಾಜನ್ ದೈವ) ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ  ಸದಸ್ಯರುಗಳಾದ ಮಹಾಲಿಂಗ ಭಟ್ ಬಿ, ಜನಾರ್ದನ ಪೂಜಾರಿ ಪದಡ್ಕ, ಶ್ರೀನಿವಾಸ್ ಗೌಡ ಕನ್ನಯ, ಪುರಂಧರ ರೖೆ ಕುದ್ಕಾಡಿ, ಉದಯ ಕುಮಾರ್ ಪಡುಮಲೆ,  ಗೋಪಾಲ ನಾಯ್ಕ ದೊಡ್ಡಡ್ಕ,   ಶ್ರೀ ಪೂಮಾಣಿ ಕಿನ್ನಿಮಾಣಿ, ಶ್ರೀ ವ್ಯಾಘ್ರ ಚಾಮುಂಡಿ (ರಾಜನ್ ದೈವ) ದೈವಸ್ಥಾನದ ವ್ಯವಸ್ಥಾಪನಾ ಸಮತಿ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಆನಿಲ್ ಕುಮಾರ್ ಕನ್ನಡ್ಕ, ಗಣೇಶ್ ಭಟ್ ಈಶಮೂಲೆ,  ರೋಹಿತ್ ಮುಡಿಪಿನಡ್ಕ, ದಯಾ ವಿ ರೖೆ ಬೆಳ್ಳಿಪ್ಪಾಡಿ, ಶೀಧರ ನಾಯ್ಕ ನೇರ್ಲಂಪ್ಪಾಡಿ, ಶಶಿಧರ ರೖೆ ಕತ್ಯಾಳ,   ಪ್ರಗತಿಪರ ಕೃಷಿಕರಾದ  ಜಯಂತ ರೖೆ ಕುದ್ಕಾಡಿ, ಕೃಷ್ಣ ರೖೆ ಕುದ್ಕಾಡಿ, ನಾಗರಾಜ್ ಭಟ್ ಅರ್ತಿಕೂಡ್ಲು  ಕೃಷ್ಣ ಭಟ್ ಬೀರಮೂಲೆ,  ಶ್ರೀನಿವಾಸ್ ಭಟ್ ದೇವಸ್ಯ, ನಿತ್ಯಾನಂದ ಮರದಮೂಲೆ, ಗಣೇಶ್ ಭಟ್ ಪಾದಕರ್ಯ,  ಶ್ರೀಪತಿ ಭಟ್ ಇಂದಾಜೆ, ಕೇಶವ ಭಟ್ ಇಂದಾಜೆ,  ಉದ್ಯಮಿ ಸುಧಾಕರ ರೖೆ ಮಂಗಳಾದೇವಿ, ಜಯರಾಮ ಗೌಡ ಕನ್ನಡ್ಕ, ಪುರುಷೋತ್ತಮ ಗೌಡ, ಲಿಂಗಪ್ಪ , ಕುಂಬ್ರ  ಶ್ರೀರಾಮ ಭಜನಾ ಮಂದಿರದ ಮಾಜಿ  ಅಧ್ಯಕ್ಷ  ಪದ್ಮನಾಭ ರೖೆ ಅರೆಪ್ಪಾಡಿ, ಪಡುಮಲೆ ಶ್ರೀ ಶಾಸ್ತಾರ ಸ್ಫೋಟ್ಸ್ ಕ್ಲಬ್ ನ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ, ದೖೆವ ನರ್ತಕ ಡಾ ರವೀಶ್ ಪಡುಮಲೆ,  ಹಾಗೂ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು ಸದಸ್ಯರು ವಿವರ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಭಾಗವಹಿಸಿದರು.

ಶ್ರೀನಿವಾಸ್ ಭಟ್ ದಂಪತಿಗಳಿಂದ ಮೆರವಣಿಗೆ ಚಾಲನೆ
ಕೊಡಿಮರವನ್ನು ಲಾರಿ ಮೇಲಿಟ್ಟು ಹೂವಿನ ಮಾಲೆ ಹಾಕಿ ಅಲಂಕರಿಸಿ ಚಂದುಕೂಡ್ಲು ಶ್ರೀನಿವಾಸ್ ಭಟ್ ಮನೆಯಂಗಳದಲ್ಲಿ  ಶ್ರೀನಿವಾಸ್  ಮತ್ತು ವೀಣಾ ಶ್ರೀನಿವಾಸ್ ಭಟ್ ದಂತಿಗಳು ಅರತಿ ಬೆಳಗಿಸಿ ತೆಂಗಿನಕಾಯಿ ಹೊಡೆಯುವ ಮೂಲಕ ಮೆರವಣಿಗೆ ಚಾಲನೆ ನೀಡಿದರು.

ಚಂದುಕೂಡ್ಲು ಮನೆತನದ ಕೊಡುಗೆ:
ಪೂರ್ವಕಾಲದಲ್ಲಿ ಚಂದುಕೂಡ್ಲು ಮನೆತನದವರಿಂದಲೇ ಕೊಡಿಮರ ಸಮರ್ಪಣೆಯಾಗಿತ್ತು. ಜಾತ್ರೋತ್ಸವ ಸಂದರ್ಭದಲ್ಲಿ ಕೊಡಿಮರ ಏರಿಸುವಾಗ ಕೆಳಗೆ ಬಿದ್ದು ತುಂಡಾಗಿತ್ತು. ಪ್ರಶ್ನಾ ಚಿಂತನೆಯಲ್ಲಿ ಚಂದುಕೂಡ್ಲು ಮನೆತನದಿಂದಲೇ ಮತ್ತೆ ಕೊಡಿಮರ ಸಮರ್ಪಣೆಯಾಗಬೇಕೆಂದು ಕಂಡುಬಂದ ಹಿನ್ನೆಲೆಯಲ್ಲಿ ಇಂದು ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ದೈವಸ್ಥಾನಕ್ಕೆ ತರಲಾಯಿತು. ಮುಂದೆ ಕೆತ್ತನೆ ಕಾರ್ಯ ನಡೆದು ಮುಂದಿನ ಜಾತ್ರೋತ್ಸವಕ್ಕೆ ಸಮರ್ಪಣೆಯಾಗಲಿದೆ ಎಂದು ಶ್ರೀನಿವಾಸ ಭಟ್ ಸಿ.ಎಚ್ ತಿಳಿಸಿದರು.

LEAVE A REPLY

Please enter your comment!
Please enter your name here