ಅಗ್ನಿವೀರ್ ಪ್ರದೀಪ್ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

0

ಮೋದಿಯವರಿಂದ ಸೇನಾ ವ್ಯವಸ್ಥೆಗೆ ಹೆಚ್ಚಿನ ಬಲ: ಕ್ಯಾ. ಬ್ರಿಜೇಶ್ ಚೌಟ

ಉಪ್ಪಿನಂಗಡಿ: ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ದೇಶದ ಸೇನಾ ವ್ಯವಸ್ಥೆಗೆ ಹೆಚ್ಚಿನ ಬಲ ಬಂದಿದೆ ಎಂದು ಸಂಸದ ಕ್ಯಾ. ಬೃಜೇಶ್ ಚೌಟ ಹೇಳಿದರು.ಜೂ.18ರಂದು ಉಪ್ಪಿನಂಗಡಿಯ ಕೊಪ್ಪಳದ ಅಗ್ನಿವೀರ್‌ಗೆ ಆಯ್ಕೆಯಾದ ಪ್ರದೀಪ್ ಎ.ಕೆ. ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಮಾತನಾಡಿದ ಅವರು, “2014ರಲ್ಲಿ 2 ಲಕ್ಷ 82 ಸಾವಿರ ಕೋಟಿ ಇದ್ದ ಸೇನಾ ಬಜೆಟ್ ಮೋದಿಯವರು ಪ್ರಧಾನಿಯಾದ ಬಳಿಕ 8 ಲಕ್ಷ ಕೋ.ರೂ.ಗೆ ಬಂದು ನಿಂತಿದೆ” ಎಂದರು.

“ಪ್ರಧಾನಿ ಮೋದಿಯವರು ಸೈನಿಕರು ಮತ್ತು ಸೈನಿಕ ವ್ಯವಸ್ಥೆಗೆ ಕೊಟ್ಟ ಗೌರವ ಬೇರೆ ಯಾರೂ ಕೊಟ್ಟಿಲ್ಲ. ದೇಶದ ಸೇನೆಗೆ ಸೇರಲು ಯುವಕರು ಇನ್ನಷ್ಟು ಉತ್ಸುಕರಾಗಬೇಕು. ಪ್ರತಿಯೋರ್ವ ಮನೆ ಮಗನೂ ಸೇನೆ ಸೇರುವ ಮೂಲಕ ದೇಶ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ನರೇಂದ್ರ ಮೋದಿಯವರು ಅಗ್ನಿವೀರ್ ಯೋಜನೆ ಜಾರಿಗೆ ತಂದಿದ್ದಾರೆ. ಸೈನಿಕರಿಗಾಗಿ ಒನ್ ರ್ಯಾಂಕ್ ಒನ್ ಪೆನ್‌ಶನ್ ಅನ್ನು ಪೂರ್ಣಗೊಳಿಸಿದವರು ಮೋದಿಯವರು” ಎಂದು ತಿಳಿಸಿದರು.”ಇಂದು ನಮ್ಮ ದೇಶ ಶಸ್ತ್ರಾಸ್ತ್ರಗಳನ್ನು ತಾನೇ ಉತ್ಪಾದಿಸುವಷ್ಟು ಮುಂದುವರಿದಿದೆ. ಪೆಹಲ್ಗಾಮ್ ಹಾಗೂ ಉರಿ ಘಟನೆಯ ನಂತರ ಆಕ್ರಮಣಕಾರರಿಗೆ ತಕ್ಕ ಉತ್ತರವನ್ನು ನರೇಂದ್ರ ಮೋದಿಯವರು ಕೊಟ್ಟಿದ್ದಾರೆ. ನಮ್ಮ ಸೈನ್ಯದಂತೆ ದೇಶ ಮೊದಲು ಎಂಬ ಪರಿಕಲ್ಪನೆ ಬಿಜೆಪಿಯವರದ್ದಾಗಿದೆ. ನಾನು ಕೂಡಾ ಓರ್ವ ನಿವೃತ್ತ ಸೇನಾನಿಯಾಗಿದ್ದು, ಈಗ ನನ್ನ ಸಮವಸ್ತ್ರ ಬದಲಾಗಿದ್ದರೂ ಪರಿಕಲ್ಪನೆ ಅದೇ ಆಗಿದೆ. ದೇಶ ಮೊದಲೆಂಬ ಪರಿಕಲ್ಪನೆ ಎಲ್ಲರಲ್ಲಿ ಬರಬೇಕು. ಈ ಅಗ್ನಿವೀರನನ್ನು ಸನ್ಮಾನಿಸುವ ಮೂಲಕ ಇದು ರಾಷ್ಟ್ರಕ್ಕೆ ಸಲ್ಲಿಸುವ ಗೌರವವಾಗಿದೆ” ಎಂದರು. ಇದೇ ವೇಳೆ ಎಂಟು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದೀಪ್ ಪೂಜಾರಿ ನೆಡ್ಚಿಲ್ ಅವರನ್ನು ಸಂಸದರು ಗೌರವಿಸಿ ಉಭಯ ಕುಶಲೋಪರಿ ವಿಚಾರಿಸಿದರು.


ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಕೋಷ್ಠದ ಸಂಯೋಜಕ ಪ್ರಸನ್ನ ದರ್ಬೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಚಾಕೊಟ್ಟೆ, ಸುನೀಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ನಾಗೇಶ್ ಟಿ.ಎಸ್., ವಿರೂಪಾಕ್ಷ ಭಟ್, ವಿದ್ಯಾಧರ ಜೈನ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು, ಬಿಜೆಪಿ ಮುಖಂಡರಾದ ರಾಮಚಂದ್ರ ಮಣಿಯಾಣಿ, ನಿತೀಶ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ ಬಪ್ಪಳಿಗೆ, ಪುನೀತ್ ಮಾಡತ್ತಾರು, ಮುಕುಂದ ಬಜತ್ತೂರು, ಉಷಾ ಚಂದ್ರ ಮುಳಿಯ, ಶಿಶೀರ್ ಪೆರೋಡಿ, ರಾಜೇಶ್ ರೈ ಪರ್ಪುಂಜ, ಮಹೇಶ್ ಕೇರಿ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮೋಹನ್ ಪಕ್ಕಳ, ಸದಾನಂದ ಪೂಜಾರಿ, ಪ್ರದೀಪ್‌ನ ತಾಯಿ ವಿನೋದಾ, ದೊಡ್ಡಮ್ಮ ಸರೋಜಿನಿ, ಸಹೋದರಿಯರಾದ ಚೈತ್ರಾ, ಧನ್ಯ, ಶೋಭಾ ಕೊಪ್ಪಳ ಪ್ರಮುಖರಾದ ಪ್ರವೀಣ್ ನೆಡ್ಚಿಲ್, ಚಂದ್ರಶೇಖರ ನಲಿಕೆಮಜಲು, ಆದಂ ಕೊಪ್ಪಳ, ಸುನೀಲ್ ಕೊಪ್ಪಳ, ವಿಜಯ ಪೂಜಾರಿ ಕುಕ್ಕುಜೆ, ಶ್ರೀನಿವಾಸ ಬೊಳ್ಳಾವು, ಯಜ್ಞಶ್ರೀ, ರವಿ ಕೊಪ್ಪಳ, ಆದಂ ಕೊಪ್ಪಳ, ನಾಸೀರ್ ಮಠ, ಮೋಕ್ಷಿತ್ ಕೊಪ್ಪಳ, ಶರತ್, ಸುನೀಲ್ ಕೊಪ್ಪಳ, ದೀಕ್ಷಿತ್ ಕೊಪ್ಪಳ, ನಾಸೀರ್ ಮಠ, ರಮೇಶ್ ನೈಕುಳಿ, ರವಿ ನೆಡ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here