ಉಪ್ಪಿನಂಗಡಿ: ವೃಕ್ಷ ಸಮೃದ್ಧಿ ಕಾರ್ಯಕ್ರಮಕ್ಕೆ ಸಂಸದರಿಂದ ಚಾಲನೆ

0

ಉಪ್ಪಿನಂಗಡಿ: ಇಲ್ಲಿನ ಟೀಮ್ ದಕ್ಷಿಣ ಕಾಶಿ ಪ್ರಾಯೋಜಿತ ‘ಧರಿತ್ರಿ ಮೇಲೆ ದಶ ಸಹಸ್ರ ವೃಕ್ಷ’ ಸಂಕಲ್ಪದಡಿ ನಡೆಸಲಾದ ವೃಕ್ಷ ಸಮೃದ್ಧಿ ಕಾರ್ಯಕ್ರಮಕ್ಕೆ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ರವರು ಗುರುವಾರದಂದು ಗಿಡ ನೆಡುವ ಮೂಲಕ ಚಾಲನೆ ನಿಡಿದರು.


ಬಳಿಕ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಪ್ರತಿಯೋರ್ವ ನಾಗರಿಕ ಒಂದೊಂದು ವೃಕ್ಷವನ್ನು ನೆಟ್ಟು ಬೆಳೆಸುವ ಸಂಕಲ್ಪವನ್ನು ತೊಡಬೇಕು. ಈ ಮೂಲಕ ಪ್ರಕೃತಿಯ ಆರಾಧನೆಯನ್ನು ಮಾಡಬೇಕು. ಪ್ರಧಾನಿಯ ಆಶಯಕ್ಕೆ ಪೂರಕವಾಗಿ ಟೀಮ್ ದಕ್ಷಿಣ ಕಾಶಿ ತಂಡದ ಸದಸ್ಯರು ಸಂಘಟನೆಯ ದಶಮಾನೋತ್ಸವದ ಒಳಗಾಗಿ ಭೂಮಿ ಮೇಲೆ ಹತ್ತು ಸಾವಿರ ಸಸಿ ನೆಟ್ಟು ಪೋಷಿಸುವ ಅಭಿಯಾನ ಕೈಗೊಂಡಿರುವುದು ಶ್ಲಾಘನೀಯ ಕಾರ್ಯ ಎಂದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಟೀಮ್ ದಕ್ಷಿಣ ಕಾಶಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ಪ್ರಕೋಷ್ಠದ ಸಂಯೋಜಕ ಪ್ರಸನ್ನ ದರ್ಬೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಚಾಕೊಟ್ಟೆ, ಸುನೀಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ನಾಗೇಶ್ ಟಿ.ಎಸ್., ವಿರೂಪಾಕ್ಷ ಭಟ್, ಟೀಂ ದಕ್ಷಿಣ ಕಾಶಿಯ ಅಧ್ಯಕ್ಷ ವಿದ್ಯಾಧರ ಜೈನ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು, ಬಿಜೆಪಿ ಮುಖಂಡರಾದ ರಾಮಚಂದ್ರ ಮಣಿಯಾಣಿ, ನಿತೀಶ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ ಬಪ್ಪಳಿಗೆ, ಪುನೀತ್ ಮಾಡತ್ತಾರು, ಆದೇಶ ಶೆಟ್ಟಿ, ಮುಕುಂದ ಬಜತ್ತೂರು, ಪ್ರೀತಂ ಪೆರ್ನೆ, ಶಿಶೀರ್ ಪೆರೋಡಿ, ರಾಜೇಶ್ ರೈ ಪರ್ಪುಂಜ, ಮಹೇಶ್ ಕೇರಿ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮೋಹನ್ ಪಕ್ಕಳ, ಸದಾನಂದ ಪೂಜಾರಿ, ಉಷಾ ಮುಳಿಯ, ಪ್ರಮುಖರಾದ ಸುಂದರ ಗೌಡ, ಕರುಣಾಕರ ಸುವರ್ಣ, ಜಗದೀಶ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಯು. ರಾಜೇಶ್ ಪೈ , ಎನ್. ಉಮೇಶ್ ಶೆಣೈ, ವಿಜೇತ್ ಜೈನ್, ಸುಧಾಕರ ಶೆಟ್ಟಿ, ಲಕ್ಷ್ಮೀಶ ನಾಯ್ಕ್, ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ವೀಣಾ ಆರ್. ಪ್ರಸಾದ್, ಟೀಂ ದಕ್ಷಿಣ ಕಾಶಿಯ ರವಿ ಇಳಂತಿಲ, ತಿಮ್ಮಪ್ಪ ಗೌಡ , ಸುನಿಲ್ ಅನಾವು, ಕಿಶೋರ್ ನೀರಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಂಗವಾಗಿ ವಿವಿಧ ಹಣ್ಣಿನ ಸಸಿಗಳನ್ನು ಕುಮಾರಧಾರ ನದಿಯ ಹಳೆ ಸೇತುವೆಯ ಬಳಿ ನೆಡಲಾಯಿತು. ಇಂದ್ರಪ್ರಸ್ಥ ವಿದ್ಯಾಲಯದ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಗಿಡನೆಡುವ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಪರಿಸರವು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಸದೃಢ ಸಮಾಜ ನಿರ್ಮಾಣಕ್ಕಾಗಿ ಪ್ರತಿ ಮನೆಯಲ್ಲಿಯೂ ಗಿಡಗಳನ್ನು ನೆಟ್ಟು ತಾಯಿ ಮಗುವನ್ನು ಪೋಷಿಸುವಂತೆ ಅವುಗಳನ್ನು ಪೋಷಿಸಿ ಬೆಳೆಸುವ ಕಾರ್ಯವಾಗಬೇಕು. ಮನೆಯಲ್ಲಿ ಮಕ್ಕಳಿಗೆ ಪರಿಸರ ಪ್ರೀತಿ ತುಂಬಬೇಕು ಎಂದು ಹೇಳಿದ ಕ್ಯಾ. ಬೃಜೇಶ್ ಚೌಟರವರು, ಜಿಲ್ಲೆಯ ಪ್ರತಿಯೋರ್ವ ವಿದ್ಯಾರ್ಥಿಯೂ ತಮ್ಮ ತಮ್ಮ ಮನೆ ಮಂದಿಯೊಡಗೂಡಿ ಒಂದೊಂದು ಸಸಿ ನೆಟ್ಟು ಪೋಷಿಸುವ ಸಂಕಲ್ಪ ತೊಡಬೇಕು. ಹಾಗೂ ಅಂತಹ ಸಸಿಗಳ ಜೊತೆ ಭಾವಚಿತ್ರವನ್ನು ತೆಗೆದು ಸಂಸದರ ಕಚೇರಿಯ ವಾಟ್ಸಪ್ ಸಂಖ್ಯೆ 7483644105 ಕ್ಕೆ ಕಳುಹಿಸಬೇಕೆಂದು ತಿಳಿಸಿದರು.

LEAVE A REPLY

Please enter your comment!
Please enter your name here