







ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಐತ್ತೂರು ವಲಯದ 102 ನೆಕ್ಕಿಲಾಡಿ ಕಾರ್ಯಕ್ಷೇತ್ರದ ದ ಕ ಜಿ ಪಂ ಸ ಹಿ ಪ್ರಾ ಶಾಲೆ ಕೆರ್ಮಾಯಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವನ್ನು ನಡೆಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ SDMC ಅಧ್ಯಕ್ಷ ಭವಾನಿ ಶಂಕರ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಪರಿಸರದ ರಕ್ಷಣೆ , ಜಾಗೃತಿಯ ಬಗ್ಗೆ ಕೃಷಿ ಮೇಲ್ವಿಚಾರಕ ಸೋಮೇಶ್ ರವರು ಮಾಹಿತಿ ನೀಡಿದರು.102 ನೆಕ್ಕಿಲಾಡಿ ಒಕ್ಕೂಟ ಸದಸ್ಯರಾದ ಶಾಂತಾ , ಸೇವಾಪ್ರತಿನಿಧಿ ಜ್ಞಾನಸೇಲ್ವಿ ಉಪಸ್ಥಿತರಿದ್ದರು.



ಶಾಲಾ ಮುಖ್ಯಗುರು ಇಂದ್ರಾವತಿ ಸ್ವಾಗತಿಸಿದರು. ಸಹ ಶಿಕ್ಷಕಿ ಮೋಹಿನಿ ಎನ್ ವಂದಿಸಿದರು . ಅತಿಥಿ ಶಿಕ್ಷಕಿ ವಾಣಿಶ್ರೀ ಮತ್ತು ಸಹ ಶಿಕ್ಷಕಿ ಅನಿತಾ ವೈ ನಿರೂಪಣೆ ಮಾಡಿದರು.
ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










