






ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ 2026-27ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಸಮಾಜ ವಿಜ್ಞಾನ ಶಿಕ್ಷಕಿ ಜಯಂತಿ ಜೆ. ಅವರ ಮಾರ್ಗದರ್ಶನದಲ್ಲಿ ನಡೆಯಿತು.


ಶಾಲಾ ನಾಯಕನಾಗಿ ರೋಶನ್ ಡಿಸೋಜ (10ನೇ) ಸಾಂಸ್ಕೃತಿಕ ಮಂತ್ರಿಯಾಗಿ ಸೋಕ್ಷ (9ನೇ) ಕ್ರೀಡಾ ಮಂತ್ರಿಯಾಗಿ ಲಿತಿನ್ (10ನೇ), ಆರೋಗ್ಯ ಮಂತ್ರಿಯಾಗಿ ಪ್ರಣೀತಾ (9ನೇ) ಹಾಗೂ ಸ್ವಚ್ಛತಾ ಮಂತ್ರಿಯಾಗಿ ಶಶಾಂತ್ (10ನೇ) ಅವರನ್ನು ಆಯ್ಕೆ ಮಾಡಲಾಯಿತು. ಉಪನಾಯಕನಾಗಿ ಧನ್ವಿತ್ ಸಿ (9ನೇ), ಶಿಕ್ಷಣ ಮಂತ್ರಿಯಾಗಿ ಸುಹಾ ಫಾತಿಮಾ (9ನೇ) ಅಕ್ಷರ ದಾಸೋಹ ಮಂತ್ರಿಗಳಾಗಿ ಶ್ರಾವ್ಯ ಹಾಗೂ ಮೋನಿಕ (9ನೇ) ಗೃಹಮಂತ್ರಿಯಾಗಿ ಆಕಾಶ್, ಸುಜಿತ್ ಎಂ (10ನೇ) ಸಹಾಯಕ ಗೃಹ ಮಂತ್ರಿಯಾಗಿ ಹೃತನ್ (9ನೇ), ತೋಟಗಾರಿಕೆ ಮಂತ್ರಿಗಳಾಗಿ ಸೇವಂತ್ ಹಾಗೂ ಯಶ್ವಿನ್ (10ನೇ), ನೀರಾವರಿ ಮಂತ್ರಿಗಳಾಗಿ ಭವಿತ್ ಕುಮಾರ್ ಹಾಗೂ ರೋಹಿತ್ (10ನೇ), ಮಹಿಳಾ ಮಂತ್ರಿಯಾಗಿ ಭೂಮಿಕ (10ನೇ) ಅವರು ಅವುರೋಧವಾಗಿ ಆಯ್ಕೆಯಾದರು. ಚುನಾವಣೆಯನ್ನು ಮೊಬೈಲ್ ಇವಿಎಂ ಮುಖಾಂತರ ಮಾಡಲಾಯಿತು.



ಮತಗಟ್ಟೆ ಅಧ್ಯಕ್ಷ ಧಿಕಾರಿಯಾಗಿ ಮುಖ್ಯ ಶಿಕ್ಷಕಿ ಧನಲಕ್ಷ್ಮಿ ,ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕರಾದ ದೀಪಾ ಎಂ, ಜ್ಯೋತಿರಾಣಿ , ನಿರ್ಮಲಾ ರೋಡ್ರಿಗಸ್ ಹಾಗೂ ಲಿಂಗಪ್ಪ ಎನ್. ಸಹಕರಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಜಯಂತಿ ಜೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಂತ್ರಿ ಮಂಡಲದ ಕಾರ್ಯಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು.










