ಪಾಣಾಜೆ ವಲಯ ಕಾಂಗ್ರೆಸ್ ಸಮಿತಿ ಸಭೆ

0

ಕಾರ್ಯಕರ್ತರ ಸಮಸ್ಯೆಗಳನ್ನು ಬ್ಲಾಕ್ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನ- ಕೆ.ಪಿ.ಆಳ್ವ

ನಿಡ್ಪಳ್ಳಿ; ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು.ಕಾರ್ಯಕರ್ತರ ಸಮಸ್ಯೆಗಳನ್ನು ಬ್ಲಾಕ್ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸಲಾಗುವುದು ಮಾತ್ರವಲ್ಲ ಶಾಸಕರ ಗಮನಕ್ಕೆ ತರಲಾಗುವುದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಹೇಳಿದರು.ಅವರು ಜೂ.27ರಂದು ಆರ್ಲಪದವು ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪಾಣಾಜೆ ವಲಯ ಕಾಂಗ್ರೆಸ್‌ ಸಮಿತಿ ಸಭೆಯಲ್ಲಿ ಮಾತನಾಡಿದರು.ಎಸ್.ಐ.ಅರ್ ಬಗ್ಗೆ ಮಾಹಿತಿ ನೀಡಿದ ಅವರು ಪುತ್ತೂರಿನಲ್ಲಿ ನಡೆಯುವ ತರಬೇತಿಯಲ್ಲಿ ಭಾಗವಹಿಸುವಂತೆ ತಿಳಿಸಿದರು.ಪಕ್ಷ ಸಂಘಟನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಾಣಾಜೆ ವಲಯ ಸಮಿತಿ ಅಧ್ಯಕ್ಷ ಸದಾನಂದ ಭರಣ್ಯ ವಹಿಸಿದ್ದರು. ಸಭೆಯಲ್ಲಿ ಬ್ಲಾಕ್ ಉಪಾಧ್ಯಕ್ಷರುಗಳಾದ ಪಿ. ಜಿ ಶಂಕರ ನಾರಾಯಣ ಭಟ್, ಶಾಹುಲ್ ಹಮೀದ್, ಎಸ್ ಅಬೂಬಕ್ಕರ್,    ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ  ಮೈಮುನಾತುಲ್ ಮೆಹ್ರಾ ಉಪಸ್ಥಿತರಿದ್ದರು. 
ಮೆಸ್ಕಾಂ ಸದಸ್ಯ ಬಾಬು ರೈ ಕೋಟೆ, ವಲಯ ಕಾರ್ಯದರ್ಶಿ ಸರಸ್ವತಿ. ಜಿ, ಪಂಚಾಯತ್ ಮಾಜಿ ಸದಸ್ಯರಾದ ವಿಮಲಾ, ನಾರಾಯಣ ನಾಯಕ್, ಬೂತ್ ಅಧ್ಯಕ್ಷರುಗಳು, ಕಾರ್ಯಕರ್ತರು ಪಾಲ್ಗೊಂಡರು.ಕೆ.ಎ.ಅಲಿ ಸ್ವಾಗತಿಸಿ, ವಿಮಲಾ ವಂದಿಸಿದರು.

LEAVE A REPLY

Please enter your comment!
Please enter your name here