






ನಿಡ್ಪಳ್ಳಿ; ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ಆಯ್ಕೆಯಾದ ಸೂರಂಬೈಲ್ ನಿವಾಸಿ ಪ್ರವೀಣ್ ಮತ್ತು ಗೀತಾ ದಂಪತಿಗಳ ಸುಪುತ್ರ ವಿಜೀತ್ ಕುಮಾರ್ ರೈಯವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಜೂ.27 ರಂದು ಅವರ ನಿವಾಸದಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಮಾತನಾಡಿದ ಎಸ್. ಅಬೂಬಕ್ಕರ್ ವಿಜೀತ್ ಕುಮಾರ್ ಅಗ್ನಿ ವೀರ್ ಗೆ ಆಯ್ಕೆ ಯಾಗಿದ್ದು ನಮ್ಮೂರಿಗೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ನಡೆಯುವ ತರಬೇತಿಯಲ್ಲಿ ಹೆಚ್ಚಿನ ಸಾಧನೆ ಮಾಡಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.



ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ ವಿಜೀತ್ ಕುಮಾರ್ ರವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಲ್ಲಾ ರೀತಿಯ ಸಹಕಾರ ವನ್ನು ನೀಡುವುದಾಗಿ ಹೇಳಿದರು.ಪಾಣಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸದಾನಂದ ಭರಣ್ಯ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರೂ, ಮಾರ್ಗದರ್ಶಕರೂ ಆದ ವಿಶ್ವನಾಥ್ ರೈ ಕಡಮಾಜೆ, ಪಿ.ಜಿ.ಶಂಕರ ನಾರಾಯಣ ಭಟ್, ಮೈಮುನಾತುಲ್ ಮೆಹರಾ, ವಿಮಲಾ, ನಾರಾಯಣ ನಾಯಕ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಮೆಸ್ಕಾಂ ಸದಸ್ಯರಾದ ಬಾಬು ರೈ ಕೋಟೆ ಸ್ವಾಗತಿಸಿ, ವಿಮಲಾ ವಂದಿಸಿದರು.









