






ಕುಂಬ್ರ ಮರ್ಕಝ್ ದಕ್ಷಿಣ ಭಾರತದ ಅಭಿಮಾನ ಕೇಂದ್ರ-ಅರಿಯಡ್ಕ ಹಾಜಿ


ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ನಿರ್ವಹಣಾ ಸಮಿತಿ ಸಮಾವೇಶ ಮರ್ಕಝ್ ಅಡಿಟೋರಿಯಂನಲ್ಲಿನಡೆಯಿತು. ಸುಳ್ಯ ಸುಡಾ ಅಧ್ಯಕ್ಷ ಮುಸ್ತಫಾ ಸುಳ್ಯ ಸಭೆ ಉದ್ಘಾಟಿಸಿದರು. ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಮುಖರಾದ ಬಿ.ಕೆ ಮುಹಮ್ಮದ್ ಅಲಿ ಫೈಝಿ ಮಾತನಾಡಿ ಮರ್ಕಝುಲ್ ಹುದಾ ಸಮಾಜಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಿದ್ದು ಪ್ರತೀ ವಾರ ಹಾಸ್ಟಲ್ ವಿದ್ಯಾರ್ಥಿನಿಯರನ್ನೆಲ್ಲಾ ಒಟ್ಟು ಸೇರಿಸಿ ನಡೆಸುವ ಆತ್ಮಸಂಸ್ಕರಣ ಸೆಮಿನಾರ್ ಇದು ಎಲ್ಲೂ ಇಲ್ಲದ ಕೇವಲ ಮರ್ಕಝ್ ಹಾಸ್ಟಲ್ನ ವಿಶೇಷತೆಯಾಗಿದೆ ಎಂದರು.



ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಎಂಎಸ್ಎಂ ಅಬ್ದುರ್ರಶೀದ್ ಝೈನಿ ಮಾತನಾಡಿ ಸಿಲ್ವರ್ ಜ್ಯುಬಿಲಿ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಇಲ್ಲಿ ಡಾಕ್ಟರ್, ಇಂಜಿನಿಯರ್, ಸಿ.ಎಗಳನ್ನು ಕಲಿಸಿಕೊಡಲು ಬೇಕಾದಷ್ಟು ಕಾಲೇಜುಗಳಿವೆ. ಆದರೆ ಡಾಕ್ಟರ್, ಇಂನಿಯರ್ ನಮ್ಮ ಸಂಸ್ಕಾರದೊಳಗೆ ನಿಂತು ಸುಸಂಸ್ಕೃತ ಚೌಕಟ್ಟಿನಲ್ಲಿ ಬೆಳೆದು ಜೀವನದಲ್ಲಿ ಅಳವಡಿಸಿಕೊಂಡು ಬದುಕಲು ಕಲಿಸಿಕೊಡುವ ವಿದ್ಯಾಕೇಂದ್ರಗಳಿಲ್ಲ, ಮರ್ಕಝ್ ಇದನ್ನು ಮಾಡುತ್ತಿದೆ, ಎರಡೂವರೆ ದಶಕಗಳ ನಮ್ಮ ಸಾಧನೆಗೆ ಮೆರುಗಾಗಿ ಹತ್ತು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿನಿಯರು ಇಲ್ಲಿಂದ ಕಲಿತು ಹೊರಹೋಗಿದ್ದು ಸಮ್ಮೇಳನದ ಯಶಸ್ವಿಗಾಗಿ ಎಲ್ಲರ ಸಂಪೂರ್ಣ ಸಹಕಾರ ಇರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಸಿಲ್ವರ್ ಜುಬಿಲಿ ಘೋಷಣೆಯಾಗಿದೆ. ಮರ್ಕಝ್ನ ಕ್ರಾಂತಿಕಾರಕ ಚಟುವಟಿಕೆಗಳು ಪ್ರತಿಯೊಬ್ಬರಿಗೂ ತಿಳಿಯಬೇಕು. ಸಮ್ಮೇಳನದ ಯಶಸ್ವಿಗಾಗಿ ಎಲ್ಲರೂ ಕೈಜೋಡಿಸಬೇಕು. ದಕ್ಷಿಣ ಭಾರತದ ಅಭಿಮಾನದ ಸಂಸ್ಥೆಯಾಗಿರುವ ಮರ್ಕಝ್ ಸಮಾಜಕ್ಕೆ ಮತ್ತಷ್ಟು ಕೊಡುಗೆಗಳನ್ನು ನೀಡಲಿದೆ ಎಂದು ಹೇಳಿದರು.
ಮರ್ಕಝ್ ಥಿಯೋಲಜಿ ವಿಭಾಗದ ಉಪಪ್ರಾಂಶುಪಾಲ ಜಲೀಲ್ ಸಖಾಫಿ ಜಾಲ್ಸೂರು, ಚಿಂತಕ ಶಾಮಿಲಿ ಫೈಝಿ ಕುಪ್ಪೆಟ್ಟ, ಗಡಿನಾಡ ಸಂಘಟನೆಯ ಮುಖಂಡ ಡಾ.ಎಸ್ ಅಬೂಬಕ್ಕರ್ ಆರ್ಲಪದವು, ಮದೀನತ್ತುನ್ನೂರು ಬಿಕ್ಕೋಡು ಇದರ ಪ್ರಾಂಶುಪಾಲ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಸುನ್ನೀ ಸಂಘಟನಾ ನಾಯಕ ಇಕ್ಬಾಲ್ ಬಪ್ಪಳಿಗೆ, ಪುತ್ತೂರು ಸುನ್ನೀ ಫೌಂಡೇಶನ್ ಉಪಾಧ್ಯಕ್ಷರಾದ ಕೆ.ಇ ಅಬೂಬಕ್ಕರ್ ನೆಲ್ಯಾಡಿ, ಅನಿವಾಸಿ ಉದ್ಯಮಿ ಖಲಂದರ್ ಹಾಜಿ ಕಬಕ ಮೊದಲಾದವರು ಸಮಯೋಚಿತವಾಗಿ ಮಾತನಾಡಿದರು.
ಗಲ್ಫ್ ಜಿಸಿಸಿ ಸಂಚಾಲಕ ಶಂಸುದ್ದೀನ್ ಬೈರಿಕಟ್ಟೆ, ಮರ್ಕಝ್ ಕುಂಬ್ರ ಸಮಿತಿಯ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಸದಸ್ಯರಾದ ಯೂಸುಫ್ ಹಾಜಿ ಕೈಕಾರ, ಕರೀಂ ಕಾವೇರಿ, ಎಸ್ವೈಎಸ್ ಪ್ರಮುಖರಾದ ಸ್ವಾಲಿಹ್ ಮುರ, ಹಮೀದ್ ಸುಣ್ಣಮೂಲೆ, ಕೆಎಂಜೆ ರಾಜ್ಯ ಸಮಿತಿ ಸದಸ್ಯ ಸುಲೈಮಾನ್ ಹಾಜಿ ನೆಲ್ಯಾಡಿ, ಕೆಎಂಜೆ ಕಡಬ ಕೋಶಾಧಿಕಾರಿ ಉಮರ್ ಹಾಜಿ ಕಡಬ, ಹಾಸನ ಇಶ್ಕೇ ಮದೀನ ಟ್ರಸ್ಟ್ ಚೇರ್ಮೆನ್ ಇಬ್ರಾಹಿಂ ಖಲೀಲ್, ಜಲೀಲ್ ಹಾಜಿ ಕುಂಬ್ರ, ಹಮೀದ್ ಕಬಕ, ಮುಹಮ್ಮದ್ ಅಡ್ಕ, ಬರಹಗಾರ ಹಾರಿಸ್ ಅಡ್ಕ, ಪುತ್ತೂರು ಸುನ್ನೀ ಫೌಂಡೇಶನ್ ಪ್ರಮುಖರಾದ ಮೂಸಾ ಚೆಲ್ಯಡ್ಕ, ಉಸ್ಮಾನ್ ಹಾಜಿ ಪದಂಜಾರ್, ಉಮರ್ ಹಾಜಿ ತಾಜ್ ನೆಲ್ಯಾಡಿ, ಎಸ್ಎಸ್ಎಫ್ ಪುತ್ತೂರು ಡಿವಿಜನ್ ಕಾರ್ಯದರ್ಶಿ ಸಾಬಿತ್ ಪಾಟ್ರಕೋಡಿ, ಮಜೀದ್ ಕಬಕ, ಎಸ್.ಎಂ ಅಬೂಬಕ್ಕರ್ ಮುಸ್ಲಿಯಾರ್ ಶೇಕಮಲೆ, ಕುಂಞಿ ಶೇಕಮಲೆ, ಎಸ್ವೈಎಸ್ ಪುತ್ತೂರು ಪ್ರಮುಖರಾದ ಅಝೀಝ್ ಚೆನ್ನಾರ್, ತಖಿಯ್ಯುದ್ದೀನ್ ಮದನಿ, ಅಬೂಬಕ್ಕರ್ ಹಂದಾನಿ ಕಾವು, ಕುಂಬ್ರ ಎಸ್ಎಸ್ಎಫ್ ಅಧ್ಯಕ್ಷ ಸಿನಾನ್ ಗಟ್ಟಮನೆ, ಉಪಾಧ್ಯಕ್ಷ ಹಾಶಿಮಿ ಉಸ್ತಾದ್, ಪ್ರಮುಖರಾದ ಆಸಿಫ್ ಅಜಿಲಮೊಗರು, ಮುಸ್ತಫ ಗಟ್ಟಮನೆ, ಉನೈಸ್ ನೇರೋಳ್ತಡ್ಕ, ಅಸ್ಗರ್ ಮೈದಾನಿಮೂಲೆ, ಅನ್ಸಾರ್, ಇಲ್ಯಾಸ್ ಕಟ್ಟತ್ತಾರು ಉಪಸ್ಥಿತರಿದ್ದರು.










