ಬೆದ್ರಾಳ : ಗಾಳಿಗೆ ಉರುಳಿದ ಮರ, ವಿದ್ಯುತ್‌ ಕಂಬ – ಸಂಚಾರಕ್ಕೆ ಅಡ್ಡಿ

0

ಪುತ್ತೂರು: ಜು.5ರಂದು ಸಂಜೆ ಸುರಿದ ಭಾರಿ ಗಾಳಿ ಮತ್ತು ಮಳೆಗೆ ಪುತ್ತೂರು ತಾಲೂಕಿನ ಬೆದ್ರಾಳ ಸಮೀಪ ಮರವೊಂದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ನಡೆದಿದೆ.

ಇದರಿಂದಾಗಿ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಮತ್ತು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಆಗಮಿಸಿ ಮರ ತೆರವುಗೊಳಿಸುವ ಕಾರ್ಯ ಕೈಗೊಂಡರು.ಇದರ ಜೊತೆಗೆ ಈ ಭಾಗದಲ್ಲಿ ಹಲವು ವಿದ್ಯುತ್ ಕಂಬಗಳು ಧರೆಗುರುಳಿರುವುದಾಗಿ ತಿಳಿದುಬಂದಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here