ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ರಣಮಂಗಲ ದೇವಸ್ಥಾನಕ್ಕೆ ಭೇಟಿ- ತಡೆಗೋಡೆ ನಿರ್ಮಾಣಕ್ಕೆ ರೂ.5 ಲಕ್ಷ ಅನುದಾನ ಘೋಷಣೆ

0

ನಿಡ್ಪಳ್ಳಿ: ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ  ಪಾಣಾಜೆ ಶ್ರೀ ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜು.4 ರಂದು ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಕೃಷ್ಣ ಬೊಳಿಲ್ಲಾಯ ಅವರನ್ನು ಶಾಲು ಹೊದಿಸಿ ಸ್ವಾಗತಿಸಿದರು.

ದೇವಸ್ಥಾನದ  ತಡೆಗೋಡೆ ನಿರ್ಮಾಣಕ್ಕೆ ರೂ.5 ಲಕ್ಷ  ಅನುದಾನವನ್ನು ಈ ಸಂದರ್ಭದಲ್ಲಿ ಅವರು ಘೋಷಿಸಿದರು. ಪುತ್ತೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ತಾಲೂಕಿನ ಪ್ರಮುಖರಾದ ವಿದ್ಯಾಧರ ಜೈನ್,ಕರುಣಾಕರ ಶೆಟ್ಟಿ  ಕೊಮ್ಮಂಡ, ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣಪತಿ ಬಲ್ಯಾಯ ಹಾಗೂ ಪಕ್ಷದ  ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here