







ಪುತ್ತೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಇರ್ದೆ ಗ್ರಾಮದ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರಮುಖ ಪ್ರವೇಶ ದ್ವಾರದ ದಾರಂದ ಮುಹೂರ್ತವು ಜು.9ರಂದು ನೆರವೇರಿತು.


ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕ ಅನಂತರಾಮ ಮಡ್ಕುಳ್ಳಾಯ ಅವರ ಪೌರೋಹಿತ್ಯದಲ್ಲಿ ಮುಹೂರ್ತ ನೆರವೇರಿತು.ವಾರ್ಷಿಕ ಜಾತ್ರೋತ್ಸವದ ಸಮಯದಲ್ಲಿ ದೇವರ ಸವಾರಿ ಕಟ್ಟೆಪೂಜೆ ಸ್ಥಗಿತಗೊಳಿಸುವ ಹಿನ್ನೆಲೆಯಲ್ಲಿ ದೇವರಿಗೆ ಪ್ರಾರ್ಥಿಸಿ, ಕಟ್ಟೆಯ ಮ್ಹಾಲಕರಿಗೆ ಪ್ರಸಾದ ವಿತರಿಸಲಾಯಿತು.



ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬಾಲ್ಯೊಟ್ಟು ಗುತ್ತು, ಸಂಚಾಲಕ ರಾಧಾಕೃಷ್ಣ ರೈ ಬಾಲ್ಯೊಟ್ಟು ಗುತ್ತು, ಕೋಶಾಧಿಕಾರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟು ಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮನಮೋಹನ ಅರಂಬ್ಯ, ನಾಗರಾಜ್ ಭಟ್ ಘಾಟೆ, ಸುಬ್ಬಣ್ಣ ನಾಯ್ಕ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ರಮಣ ಭಟ್ ಘಾಟೆ, ಯತೀಶ್ ರೈ ಚೆಲ್ಯಡ್ಕ, ಶ್ಯಾಮ್ ಜಿತ್ ಪಾಪನಡ್ಕ, ಪ್ರವೀಣ್ ಕುಮಾರ್ ರೈ ಪಂಜೊಟ್ಟು, ಆನಂದ ಗೌಡ, ದಾಸ್ ಪ್ರಕಾಶ್ ರೈ ಉಪ್ಪಳಿಗೆ, ವಿಶ್ವನಾಥ ರೈ ಬಾಲ್ಯೊಟ್ಟು ಗುತ್ತು, ದಿನೇಶ್ ರೈ ಬಾಳೆಹಿತ್ಲು, ಪ್ರಕಾಶ್ ರೈ ಬೈಲಾಡಿ, ಜಗದೀಶ್ ರೈ ಬೈಲಾಡಿ, ಕಿರಣ್ ಬೈಲಾಡಿ, ಹುಕ್ರಪ್ಪ ಗೌಡ ಬಾಳೆಹಿತ್ಲು, ರಾಜಾರಾಮ ಭಟ್, ರಕ್ಷಣ್ ರೈ ಪುಷ್ಪರಾಜ ಶೆಟ್ಟಿ ಬೈಲಾಡಿ, ಧನ್ಯರಾಜ್, ವಿಶ್ವನಾಥ ರೈ, ತಾರಾನಾಥ ರೈ ಬಾಲ್ಯೊಟ್ಟುಗುತ್ತು, ಗಿರೀಶ್ ರೈ ಬಾಲ್ಯೊಟ್ಟು ಕೆಲ್ಲಾಡಿ, ರವೀಂದ್ರ ಶೆಟ್ಟಿ, ಸೇಸಪ್ಪ ಗೌಡ ಪಾಪನಡ್ಕ, ಲಿಂಗಪ್ಪ ಆಚಾರ್ಯ ಚೆಲ್ಯಡ್ಕ, ಕೇಶವ ಕುಮಾರ್ ಜೋಗಿಮೂಲೆ ದರ್ಬೆ, ಸಂತೋಷ ಆಚಾರ್ಯ ಚೆಲ್ಯಡ್ಕ, ಶಿವ ಪ್ರಸಾದ್ ಉಪ್ಪಳಿಗೆ ಸಹಿತ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ದೇವರ ಪೂಜಾ ಸಮಯದಲ್ಲಿ ಬದಲಾವಣೆ
ದೇವರ ಬಾಲಾಲಯ ಪ್ರತಿಷ್ಠಾಪಣೆಯ ಬಳಿಕ ಬೆಳಿಗ್ಗೆ 9 ಗಂಟೆಗೆ ದೇವರಿಗೆ ಪೂಜೆ ನಡೆಯುತ್ತಿತ್ತು. ಭಕ್ತಾದಿಗಳ ಅನುಕೂಲಕ್ಕಾಗಿ ಪೂಜಾ ಸಮಯವನ್ನು ಬದಲಾಯಿಸಲಾಗಿದ್ದು ಬೆಳಿಗ್ಗೆ ನಡೆಯುತ್ತಿದ್ದ ಪೂಜೆಯು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ದೇವರಿಗೆ ಹಾಲು ಪಾಯಸ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸುವವರು ಮಧ್ಯಾಹ್ನದ ಪೂಜೆ ವೇಳೆ ಸಲ್ಲಿಸಬಹುದು. ಹಾಲು ಪಾಯಸ ಸೇವೆ ಸಲ್ಲಿಸುವ ಭಕ್ತಾದಿಗಳು ಬೆಳಿಗ್ಗೆ 10.30ಕ್ಕೆ ಸಾಮಾಗ್ರಿಗಳನ್ನು ತಲುಪಿಸಬೇಕು. ರಾತ್ರಿ ಪೂಜೆಯು 7.30ಕ್ಕೆ ನಡೆಯಲಿದೆ. ಕಾರ್ತಿಕ ಪೂಜೆಯು ಸಾಂಕೇತಿಕವಾಗಿ ನಡೆಸಲಾಗುವುದು ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.










