







ಪುತ್ತೂರು: ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿ ವೈದ್ಯಕೀಯ ತಜ್ಞ ಡಾ|ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಮಾಸಿಕ ತಪಾಸಣಾ ಶಿಬಿರದಲ್ಲಿ ಉಚಿತ ಥೈರಾಯಿಡ್ (TSH), ಶುಗರ್, HBA1C ಮತ್ತು BMD ಟೆಸ್ಟ್ ಹಾಗೂ ರಿಯಾಯಿತಿ ದರದಲ್ಲಿ ಕೊಲೆಸ್ಟರಾಲ್ ಟೆಸ್ಟ್ ಜು.9ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.



ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ರವರು ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಕಾಲಕಾಲಕ್ಕೆ ತಜ್ಞ ವೈದ್ಯರಿಂದ ತಪಾಸಣೆ ಮಾಡುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಿ. ಕಳೆದ ಹನ್ನೆರಡು ವರ್ಷಗಳಿಂದ ನಮ್ಮ ಈ ಕ್ಲಿನಿಕ್ ನಲ್ಲಿ ರೋಟರಿ ಪುತ್ತೂರು ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳು ನಡೆಯುತ್ತಾ ಬಂದಿದೆ ಎಂದರು.



ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ರೋಟರಿ ಪುತ್ತೂರು ಸದಸ್ಯ ಡಾ.ನಝೀರ್ ಅಹಮದ್ ರವರು ಕಳೆದ ಹಲವು ವರ್ಷಗಳಿಂದ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮುಂದೆಯೂ ಇಂತಹ ಶಿಬಿರಗಳು ನಡೆಯುತ್ತಿರಲಿ ಎಂದರು.
ರೋಟರಿ ಪುತ್ತೂರು ಉಪಾಧ್ಯಕ್ಷ ಸುದರ್ಶನ್ ರಾವ್ ಉಪಸ್ಥಿತರಿದ್ದರು. ರೋಟರಿ ಪುತ್ತೂರು ಕಾರ್ಯದರ್ಶಿ ಲೋವಲ್ ಮೇವಾಡ ವಂದಿಸಿದರು. ಮ್ಯಾನ್ ಕೈಂಡ್ ನ ರಕ್ಷಿತ್ ಹಾಗೂ ತೌಸೀಫ್, ಲೈನಕ್ಸ್ ಲ್ಯಾಬೋರೇಟರಿಯ ಕೃಷ್ಣ, ಮೈಕ್ರೋ ಡಿಟಿಎಫ್ ನ ಪ್ರಶಾಂತ್, ಎಂ.ಆರ್ ಎರಿಸ್ ಲೈಫ್ ಸೈನ್ಸ್ ನ ಕೃಷ್ಣ, ಇಂಟಾಸ್ ಫಾರ್ಮ್ ನ ಚರಣ್, ಡಾ.ನಝೀರ್ ಅಹಮದ್ ಕ್ಲಿನಿಕ್ ಸಿಬ್ಬಂದಿ ಸಹಕರಿಸಿದರು.
ಭಾಗವಹಿಸಿದ ಫಲಾನುಭವಿಗಳು..
*ಮಧುಮೇಹ-79 ಮಂದಿ
*ಥೈರಾಯಿಡ್-70 ಮಂದಿ
*HBA1C-59 ಮಂದಿ
*ಕೊಲೆಸ್ಟರಾಲ್-38 ಮಂದಿ
*ಬಿಎಂಡಿ-38 ಮಂದಿ










