






ಪುತ್ತೂರು: ಇತ್ತೀಚೆಗೆ ನಿಧನರಾದ ಶಾಂತಿಗೋಡು ಗ್ರಾಮದ ಪಾದೆ ದಿ. ಸಾಂತಪ್ಪ ಗೌಡರ ಪತ್ನಿ ಸುಂದರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಜು.12ರಂದು ಶಾಂತಿಗೋಡು ಪಾದೆ ಮನೆಯಲ್ಲಿ ನಡೆಯಿತು.


ಕೃಷಿಕರಾದ ಎಸ್.ಪಿ ನಾರಾಯಣ ಗೌಡ ಶಾಂತಿಗೋಡು ಪಾದೆರವರು ಮೃತರ ಜೀವನದ ಪರಿಚಯದ ಮೂಲಕ ನುಡಿನಮನ ಸಲ್ಲಿಸಿದರು. ನಂತರ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.



ಮೃತರ ಪುತ್ರ, ಊರ ಗೌಡರಾದ ಮೋಹನ ಗೌಡ ಶಾಂತಿಗೋಡು ಪಾದೆ, ಶಶಿಕುಮಾರ್ ಶಾಂತಿಗೋಡು ಪಾದೆ, ಪುತ್ರಿಯರಾದ ಚಂದ್ರಾವತಿ, ವಸಂತಿ, ಪದ್ಮಾವತಿ, ಜಯಶ್ರೀ, ವೀಣಾ, ಅಳಿಯಂದಿರಾದ ಸೀತಾರಾಮ ಗೌಡ, ಚೆನ್ನಪ್ಪ ಗೌಡ, ರಮಾನಂದ ಗೌಡ, ಸುಧಾಕರ ಗೌಡ, ವೆಂಕಪ್ಪ ಗೌಡ, ಸೊಸೆಯಂದಿರಾದ ಲತಾ ಮತ್ತು ಶ್ವೇತಾ ಹಾಗೂ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು, ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ವಿವಿಧ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.










