







ಪುತ್ತೂರು:ಸುಮಾರು 67 ವರ್ಷಗಳ ಇತಿಹಾಸವಿರುವ ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ದು ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ನೋಂದಣೆಯಲ್ಲಿ ಕುಂಠಿತವಾಗಿರುವುದು ಕಂಡು ಬರುತ್ತಿದೆ. ಆದರೆ ಕೆಲವೊಂದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿರುವುದು ಉತ್ತಮ ಬೆಳವಣಿಯಾಗಿದೆ.ಇಲ್ಲಿನ ಮುರ ಸರಕಾರಿ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ಮಕ್ಕಳ ಸಂಖ್ಯೆ ಇಳಿತವನ್ನು ಅರಿತ ಹಿರಿಯ ವಿದ್ಯಾರ್ಥಿಗಳ ಸಂಘವು ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಮಾತುಕತೆ ನಡೆಸಿ ಪ್ರಸ್ತುತ ಈ ವರ್ಷದಿಂದ ಉಚಿತವಾಗಿ ಎಲ್.ಕೆ.ಜಿ ಶಿಕ್ಷಣವನ್ನು ಆರಂಭಿಸಿರುತ್ತಾರೆ.


ಇದರ ಉದ್ಘಾಟನೆಯು ಇತ್ತೀಚೆಗೆ ಹಿರಿಯ ವಿದ್ಯಾರ್ಥಿಗಳ, ಶಾಲಾ ಎಸ್.ಡಿ.ಎಂ.ಸಿ, ಪೋಷಕರ ಮತ್ತು ಊರಿನವರ ಉಪಸ್ಥಿತಿಯಲ್ಲಿ ನಡೆಯಿತು. ಪ್ರಸ್ತುತ ಎಲ್.ಕೆ.ಜಿಯಲ್ಲಿ 16 ಮಕ್ಕಳು ದಾಖಲಾಗಿರುವುದು ಸಂತೋಷ ತಂದಿದ್ದು ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಎಲ್ಲಾ ಹಿರಿಯ ವಿದ್ಯಾರ್ಥಿಗಳ ಹಾಗೂ ಊರಿನವರ ಸಹಕಾರ ಇದ್ದರೆ ನಮ್ಮ ಈ ಶಾಲೆಯಲ್ಲಿ ಮೊದಲಿನಂತೆ ಮಕ್ಕಳು ತುಂಬಿ ತುಳುಕಾಡುವುದರಲ್ಲಿ ಸಂಶಯವಿಲ್ಲ ಎಂದು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಡಿ’ಸೋಜರವರು ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.




ಶಾಲೆಯ ಮುಖ್ಯಗುರು ಲತಾ ಗ್ಲಾಡಿಸ್ ತಾವ್ರೋ ಮಾತನಾಡಿ, ಎಲ್.ಕೆ.ಜಿ, ಯುಕೆಜಿ ಆದ ನಂತರ ಮುಂದಿನ ತರಗತಿಗಳು ಇಂಗ್ಲೀಷ್ ನಲ್ಲಿ ಮುಂದುವರಿಯಲಿದೆ, ಆದ್ದರಿಂದ ಪೋಷಕರು 1ನೇ ತರಗತಿಯಿಂದ ನಮ್ಮ ಶಾಲೆಯಲ್ಲಿಯೇ ಮಕ್ಕಳನ್ನು ಮುಂದುವರಿಸಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಪೋಳ್ಯ , ಉಪಾಧ್ಯಕ್ಷೆ ಶ್ರೀಮತಿ ಮಾಲತಿ, ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ವಸಂತ್ ಪೂಜಾರಿ, ಹಿರಿಯ ವಿದ್ಯಾರ್ಥಿ ಸಂಘದ ಪ್ರಥಮ ಕಾರ್ಯದರ್ಶಿ ಹಾಗೂ ಕೊಡುಗೈ ದಾನಿ ಜಿನ್ನಪ್ಪ ಪೂಜಾರಿ, ಹಿರಿಯ ವಿದ್ಯಾರ್ಥಿ ಸಂಘದ ಪ್ರಸ್ತುತ ಕಾರ್ಯದರ್ಶಿ ಫಾರೂಕ್ ಮುರ ಹಾಗೂ ಕೋಶಾಧಿಕಾರಿ ಅವಿನಾಶ್ ಮುರ, ಅಕ್ಷಯ ಇಂಡಸ್ಟ್ರೀಸ್ ಮಾಲಕ, ಕೊಡುಗೈ ದಾನಿ ಉಪಸ್ಥಿತರಿದ್ದರು.ಅಥಿತಿ ಶಿಕ್ಷಕರಾದ ಶ್ರೀಮತಿ ಅಕ್ಷಿತಾ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ರೇಷ್ಮಾ ಡಿ.ವಿ ವಂದಿಸಿದರು. ಜಿ ಪಿ ಟಿ ಶಿಕ್ಷಕಿ ಶ್ರೀಮತಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.










