ಅಗಳಿ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಅನಾವರಣ

0

ಕಾಣಿಯೂರು: ಕಾೖಮಣ ಅಗಳಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಅ.28ರಂದು ನಡೆಯಲಿರುವ 8ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಅಗಳಿ ಶ್ರೀ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರಾದ ಈಶ್ವರಚಂದ್ರ ಭಟ್ ಅವರು ಜು.19ರಂದು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಗತ್ ರಾಜ್ ಬೈತಡ್ಕ, ವೇಣುಗೋಪಾಲ್ ಕಳುವಾಜೆ, ಕುಶಾಲಪ್ಪ ಗೌಡ ಅಬೀರ, ಚಂಪಾ ಅಬೀರ, ಸವಿತಾ ಅಂಕಜಾಲು, ಪದ್ಮಾವತಿ ಹಿರಿಯಣ್ಣ, ಯಶೋದ ಪಾಲೆತ್ತಡಿ, ಉಮೇಶ್ವರಿ ಅಗಳಿ, ರಶ್ಮಿ ಕುದ್ವ, ಕಾವ್ಯ ಅಗಳಿ, ತಾರ ಬೆಳಂದೂರು, ಜಯಲಕ್ಷ್ಮಿ ಅಗಳಿ, ಪುಷ್ಪಾವತಿ ಕಳುವಾಜೆ, ಸಾವಿತ್ರಿ ಅಗಳಿ, ಜಾನಕಿ ಅಗಳಿಮೂಲೆ, ಪುಷ್ಪಾಲತಾ ಅಗಳಿ, ಚಂದ್ರಶೇಖರ್ ಮುಂಡಾಳ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here