







ಚುನಾವಣಾ ಸಮಯದಲ್ಲಿ ನೀಡಿದ್ದ ಬಹುತೇಕ ಬೇಡಿಕೆಗಳು ಈಡೇರಿಕೆ: ಶಾಸಕ ಅಶೋಕ್ ರೈ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ವಿವಿಧ ಪರಿಶಿಷ್ಟ ಜಾತಿ ಕಾಲನಿಗಳ ಅಭಿವೃದ್ದಿಗೆ ಪ್ರಗತಿ ಕಾಲೊನಿ ಯೋಜನೆಯಡಿ ಕರ್ನಾಟಕ ರಾಜ್ಯ ಸರಕಾರದಿಂದ ಮೂರು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.



ಅನುದಾನದಕ್ಕಾಗಿ ಬಂದ ಅರ್ಜಿಗಳ ಪೈಕಿ ಗ್ರಾಮವಾರು ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಇನ್ನೂ ಅನೇಕ ಅರ್ಜಿಗಳು ಬಾಕಿ ಇದ್ದು ಮುಂದೆ ಅನುದಾನ ಬರಲಿದ್ದು ಆ ಅನುದಾನವನ್ನು ಇನ್ನಷ್ಟು ಕಾಲನಿಗಳ ಅಭಿವೃದ್ದಿಗೆ ಹಂಚುವ ಕಾರ್ಯ ನಡೆಯಲಿದೆ. ಕರ್ನಾಟಕ ಕಾಂಗ್ರೆಸ್ ಸರಕಾರ ದಲಿತ ವರ್ಗಗಳ ಕಾಲನಿ ಅಭಿವೃದ್ದಿಗೆ ಹೆಚ್ಚಿನ ಮುತವರ್ಜಿ ವಹಿಸುತ್ತಿದ್ದು ಈ ಹಿಂಧೆಯೂ ಅನುದಾನವನ್ನು ಒದಗಿಸಲಾಗಿದೆ. ಬಡವರ, ದೀನ ದಲಿತರ, ಉದ್ದಾರ ಮತ್ತು ಅವರು ವಆಸಿಸುವ ಕಾಲನಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.
ಮೂರು ಕೋಟಿ ಅನುದಾನವನ್ನು ಈ ಕೆಳೆಗಿನ ಗ್ರಾಮಗಳ ಕಾಲನಿಗಳ ಅಭಿವೃದ್ದಿಗೆ ಹಂಚಿಕೆ ಮಾಡಲಾಗಿದೆ.
ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕುದೇರತಡ್ಕ- ಬಟ್ರಪಾಡಿ ರಸ್ತೆ ಅಭಿವೃದ್ಧಿ 25 ಲಕ್ಷ ರೂ, ಕುರಿಯ ಗ್ರಾಮ ಇಡಬೆಟ್ಟು ಶಾಲಾ ಬಳಿಯಿಂದ ಇಡಬೆಟ್ಟು ರಸ್ತೆ ಅಭಿವೃದ್ಧಿ ಗೆ 10 ಲಕ್ಷ ರೂ , ಬೆಳ್ಳಿಪ್ಪಾಡಿ ಗ್ರಾಮದ ನೆಕ್ಕರೆ ಎಂಬಲ್ಲಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಕೊಳ್ತಿಗೆ ಗ್ರಾಮದ ಮೊಗಪ್ಪೆ ತಮಿಳು ಸಿ.ಆರ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಬಂಟ್ವಾಳ ತಾಲೂಕಿನ ವಿಟ್ಲಮುಡೂರು ಗ್ರಾಮದ ಶಿಬರಿ ಕಲ್ಲು ಮಾಡದ ತೊಟ್ಟಿಲ ಪಾದೆ ಡೆಚ್ಚಾರ್ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಅರಿಯಡ್ಕ ಗ್ರಾಮದ ಕೌಡಿಚ್ಚಾರ್-ಗುಂಡ್ಯಡ್ಕ-ಮಾಯಿಲ ಕೊಚ್ಚಿ ಎಂಬಲ್ಲಿ ರಸ್ತೆ ಅಭಿವೃದ್ಧಿ15.00 ಲಕ್ಷ ರೂ, ಪಾಣಾಜೆ ಗ್ರಾಮದ ಅರ್ಲಪದವು (ನೆಲ್ಲಿತ್ತಿಮಾರು)ಭರಣ್ಯ ಗಿಳಿಯಾಲು, ಜಾಂಬ್ರಿ ರಸ್ತೆ ಅಭಿವೃದ್ಧಿ 20.00 ಲಕ್ಷ ರೂ, ಕೆದಂಬಾಡಿ ಗ್ರಾಮದ ತ್ಯಾಗರಾಜ ನಗರದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00ಲಕ್ಷ ರೂ,ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವದಿಂದ ಓಟೆಪಡ್ಪು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ,ಇಡ್ಕಿದು ಗ್ರಾಮದ ಮಿತ್ತೂರು ಹಳೇ ರೈಲ್ವೇ ಗೇಟಿನಿಂದ ಎಮಾಜೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಬಡಗನ್ನೂರು ಗ್ರಾಮದ ಕೆಳಗಿನ ಪೇರಾಲು, ಚೆಕ್ಕಿತ್ತಡಿ, ಬಡಕ್ಕಾಯೂರು, ಅಣಿಲೆ, ನೇರೋಳಡ್ಕ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 15.00 ಲಕ್ಷ ರೂ, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕಳೆಂಜ-ಕೆಳಗಿನ ಮನೆ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಮಾರ್ಪು ಕೆಮನಾಜೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ ರೂ , ಕೆದಿಲ ಗ್ರಾಮದ ಗಾಂಧಿನಗರ ಬಡೆಕ್ಕಿಲ ಗಾಳಿಗುಡ್ಡೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ10.00 ಲಕ್ಷ ರೂ, ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಕೈಂದಾಡಿ ಪಜಿರೋಡಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, 34-ನೆಕ್ಕಿಲಾಡಿ ಗ್ರಾಮದ ಮೈಂದಡ್ಕದಿಂದ ದರ್ಬೆ- ಚೀಮುಳ್ಳು- ತಾಳೆಹಿತ್ತು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ , ಕಬಕ ಗ್ರಾಮದ ಪೋಳ್ಯ ಮೂಲೆಕಾಡು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 15.00 ಲಕ್ಷ ರೂ, ಮುಂಡೂರು ಗ್ರಾಮದ ಪೆರಿಯಡ್ಕ ಕುರೆಮಜಲ್ ಪುತ್ತಿಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ , ನೆಟ್ಟಣಿಗೆ ಮುಡೂರು ಗ್ರಾಮದ ಮಡ್ಯಾಲಮಜಲು ಆಲಂತ್ತಡ್ಕ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಬನ್ನೂರು ಗ್ರಾಮದ ಅಡೆಂಚಿಲಡ್ಕ ಬಲ್ಯ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ,ಆರ್ಯಾಪು ಗ್ರಾಮದ ಕಾರ್ಪಾಡಿ-ಕನ್ನಿಮಜಲು- ಉದ್ಯಂಗಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಬೆಟ್ಟಂಪಾಡಿ ಗ್ರಾಮದ ಗುಂಡ್ಯಡ್ಕ-ಕೂವೆಂಜ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ , ಕೆಯ್ಯೂರು ಗ್ರಾಮದ ಸಿ.ಆರ್.ಸಿ ಕಾಲನಿ ಪರಿಸರ ಕಣಿಯಾರು ರಸ್ತೆ ಅಭಿವೃದ್ಧಿ15.00 ಲಕ್ಷ ರೂ , ಮಾಡ್ನೂರು ಗ್ರಾಮದ ಮಾಣಿಯಡ್ಕ- ಮುಂಡಾಲೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಕೊಡಂಬಾಡಿ ಗ್ರಾಮದ ನೆಕ್ರಾಜೆಯಿಂದ ಮೋನಡ್ಕ-ಚೀಮುಳ್ಳು ವೆರೆಗೆ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ, ಇರ್ದೆ ಗ್ರಾಮದ ಪೇರಲ್ತಡ್ಕ ಬೇರಿಕೆ ರಸ್ತೆ ಅಭಿವೃದ್ಧಿ 05.00 ಲಕ್ಷ ರೂ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಅತಿ ಶೀಘ್ರದಲ್ಲೇ ಕಾಮಗಾರಿಗೆ ಶಿಲಾನ್ಯಾಸ ನಡೆದು ಕಾಮಗಾರಿ ಪ್ರಾರಂಭವಾಗಲಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾನು ವೋಟು ಕೇಳಲು ಕಾಲನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಿನ ಕಾಲನಿಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು. ಶಾಸಕನಾದರೆ ಕಾಲನಿಗಳ ಅಭಿವೃದ್ದಿ ಮಾಡುವೆ ಎಂದು ವಾಗ್ದಾನವನ್ನು ನೀಡಿದ್ದೆ. ಈ ಹಿಂದೆಯೂ ಅನುದಾನವನ್ನು ಒದಗಿಸಲಾಗಿದ್ದು ಇದೀಗ ಮತ್ತೊಮ್ಮೆ ಮೂರು ಕೋಟಿ ಅನುದಾನವನ್ನು ಸರಕಾರ ನೀಡಿದೆ. ಉಳಿದ ಕಾಲನಿಗಳ ಬೇಡಿಕೆಯನ್ನು ಶೀಘ್ರವೇ ಈಡೇರಿಸಲಾಗುವುದು. ಹಂತ ಹಂತವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಕಾರ್ಯ ನಡೆಯುತ್ತಲೇ ಇದ್ದು ಕಟ್ಟಕಡೇಯ ವ್ಯಕ್ತಿ ನಡೆದಾಡುವ ರಸ್ತೆಯನ್ನು ಅಭಿವೃದ್ದಿ ಮಾಡುವ ಗುರಿ ಇದೆ. ಗ್ರಾಮಸ್ಥರ ಸಹಕಾರವನ್ನು ಬೇಡುತ್ತಿದ್ದೇನೆ
ಅಶೋಕ್ ರೈ, ಶಾಸಕರು ಪುತ್ತೂರು










