






ಕಡಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪುತ್ತೂರು ಇವರ ವತಿಯಿಂದ ತೆಂಕಿಲ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಡಬದ ಸರಸ್ವತೀ ವಿದ್ಯಾಲಯ, ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.


14 ವರ್ಷದೊಳಗಿನ ಬಾಲಕರ (-55 ಕೆ.ಜಿ.) ವಿಭಾಗದಲ್ಲಿ 8ನೇ ತರಗತಿಯ ಕಿಶನ್ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ವಯೋಮಾನದ ವಿಭಾಗದಲ್ಲಿ 8ನೇ ತರಗತಿಯ ನಿಶ್ಮಿತ್ ಪುರಿಯ (-45 ಕೆ.ಜಿ.), ಸಾಯಿಕೃಷ್ಣ ಕೆ. (60 ಕೆ.ಜಿ. ಮೇಲ್ಪಟ್ಟು) ಹಾಗೂ ವಂದನ್ ಎಸ್. (-25 ಕೆ.ಜಿ.) ದ್ವಿತೀಯ ಸ್ಥಾನ ಪಡೆದಿದ್ದಾರೆ.



17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಶಶಾಂಕ್ ಡಿ. (82 ಕೆ.ಜಿ. ಮೇಲ್ಪಟ್ಟು) ಹಾಗೂ ಪವನ್ (-50 ಕೆ.ಜಿ.) ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ ತರಬೇತಿ ನೀಡಿದ್ದಾರೆ.










