







ಕಡಬ: ಕಡಬ ವಲಯದ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಕೋಡಿಂಬಾಳ ಅಂಗನವಾಡಿ ಕೇಂದ್ರದಲ್ಲಿ ಆ.7ರಂದು ಸ್ತನ್ಯಪಾನ ಸಪ್ತಾಹ, ಬಾಲ ವಿಕಾಸ ಸಮಿತಿ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್ ಕೋಡಿಂಬಾಳ ವೈದ್ಯರಾದ ಡಾ. ಚೇತನ್ ಕೆ. ಅವರು ಎದೆಹಾಲಿನ ಮಹತ್ವ, ಜಂತುಹುಳ ಬಾಧೆ ಹಾಗೂ ಕಾಲುಬಾಯಿ ರೋಗದ ಕುರಿತು ಮಾಹಿತಿ ನೀಡಿದರು. ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ತಾಯಿಯ ಎದೆಹಾಲಿನ ಮಹತ್ವ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಅವರು ವಿವರಿಸಿದರು.



ಅಂಗನವಾಡಿ ಶಿಕ್ಷಕಿ ಸವಿತಾ ಅವರು ಬಾಲ ವಿಕಾಸ ಸಮಿತಿ ಸಭೆ, ಸಿಬಿಇ ಕಾರ್ಯಕ್ರಮ, ಅಂಗನವಾಡಿ ಕೇಂದ್ರದಿಂದ ನೀಡಲಾಗುವ ಪೂರಕ ಆಹಾರ, ಐಸಿಡಿಎಸ್ ಯೋಜನೆಯಡಿ ಫಲಾನುಭವಿಗಳಿಗೆ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಎಸ್‌ಐಆರ್ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ದೀಕ್ಷಾ, ಪಟ್ಟಣ ಪಂಚಾಯಿತಿ ಸದಸ್ಯೆ ಗುಣವತಿ, ಆಶಾ ಕಾರ್ಯಕರ್ತೆ ಶಶಿಕಲಾ, ಸಮಿತಿ ಸದಸ್ಯರು, ಸ್ತ್ರೀಶಕ್ತಿ ಪ್ರತಿನಿಧಿಗಳು, ಮಕ್ಕಳ ಪೋಷಕರು ಹಾಗೂ ಅಂಗನವಾಡಿ ಸಹಾಯಕಿ ಉಪಸ್ಥಿತರಿದ್ದರು.










