






ಪುತ್ತೂರು: ಯೂನಿಯನ್ ಕ್ಲಬ್ (ರಿ) ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕ್ಲಬ್ ನ ವಠಾರದಲ್ಲಿ ಆಚರಿಸಲಾಯಿತು.


ಕ್ಲಬ್ ನ ಹಿರಿಯ ಸದಸ್ಯರಾದ ಕೆ ಅಬ್ದುಲ್ ರಜಾಕ್ ಸ್ವಾಗತಿಸಿದರು. ಹಿರಿಯ ಸದಸ್ಯ ಯು.ಪಿ ಉಮ್ಮರ್ ಧ್ವಜಾರೋಹಣಗೈದರು.



ಶ್ರೀ ರಾಮಕೃಷ್ಣ ಶಾಲೆಯ ಉಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಸ್ವಾತಂತ್ರ್ಯ ಗೀತೆ ಹಾಡಿದರು.
ಪುತ್ತೂರು ಕೋ. ಟೌನ್ ಬ್ಯಾಂಕ್ ನ ಪ್ರಬಂಧಕರಾದ ಶೇಖರ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ತಿಳುವಳಿಕೆ ನೀಡಿ, ಶುಭ ಹಾರೈಸಿದರು.
ಯೂನಿಯನ್ ಕ್ಲಬ್ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ವಂದಿಸಿದರು.
ಯೂನಿಯನ್ ಕ್ಲಬ್ ನ ಸದಸ್ಯರು ಮತ್ತು ಪದಾಧಿಕಾರಿಗಳು, ಕೋ. ಟೌನ್ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಮತ್ತು ಯೂನಿಯನ್ ಕ್ಲಬ್ ಮಾಲಕತ್ವದ ಅಂಗಡಿಗಳ ಬಾಡಿಗೆದಾರರು ಭಾಗವಹಿಸಿದ್ದರು.










