







ಬಡಗನ್ನೂರು: “ವಿಕಸಿತ ಭಾರತ @2047” ಹಾಗೂ “ವಂದೇ ಮಾತರಂ 150ನೇ ವರ್ಷಾಚರಣೆ”ಯ ಧ್ಯೇಯ ವಾಕ್ಯದೊಂದಿಗೆ 80ನೇ ಸ್ವಾತಂತ್ರ್ಯೋತ್ಸವವನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕದಲ್ಲಿ ಆಚರಿಸಲಾಯಿತು.


ಶಾಲಾ ಎಸ್. ಡಿ. ಯಂ. ಸಿ ಅಧ್ಯಕ್ಷ ಶುಭಕರ ನಾಯಕ್ ಡಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು. ಶಿಕ್ಷಣ ತಜ್ಞರೂ ದಾನಿಗಳು ಆದ ಬಾಲಕೃಷ್ಣ ರೈ ಸೇರ್ತಾಜೆ ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೖೆಸಿದರು. ಒಳಮೂಗ್ರು ಗ್ರಾ. ಪಂ ನಿಕಟಪೂರ್ವ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸ್ವತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸುತ್ತಾ ದೇಶದ ಸಾಧನೆಯನ್ನು ಗೌರವಿಸೋಣ ಎಂದರು.



ದ್ವಜಾರೋಹಣದ ನಂತರ ಸ್ವತಂತ್ರೋತ್ಸವದ ತಿರಂಗ ಜಾಥ ಶಾಲಾ ವಠಾರದಿಂದ ಶ್ರೀ ಮಹಾಮ್ಮಾಯಿ ಮರಾಠಿ ಸೇವ ಸಂಘ ಮುಡಾಲದ ವರೆಗೆ ನಡೆಯಿತು. ಮುಡಾಲ ಪರಿಸರದ ಸಂಘ ಸಂಸ್ಥೆಗಳು ಮತ್ತು ಮಹಮ್ಮಾಯಿ ಗೊಂಬೆ ತಂಡದವರು ವಿದ್ಯಾರ್ಥಿಗಳನ್ನು ಆದರದಿಂದ ಬರಮಾಡಿಕೊಂಡರು. ಶಾಲಾ ಹಿರಿಯ ವಿದ್ಯಾರ್ಥಿಯಾದ ನಿವೃತ್ತ ಎ ಎಸ್ ಐ ಶ್ರೀಧರ ಮಣಿಯಾಣಿ ದ್ವಜಾರೋಹಣ ನೆರವೇರಿಸಿ ದೇಶ ಸೇವೆ ಮಾಡುವ ಯೋಧರ ಹಾಗೆ ನಾವು ಕೂಡ ನಮ್ಮ ವೃತ್ತಿ ಕ್ಷೇತ್ರದಲ್ಲಿ ದೇಶ ಸೇವೆ ಮಾಡಬೇಕು ಎಂದು ಆಶಿಸಿದರು. ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪುಟಾಣಿಗಳು ಭಾರತ ಮಾತೆ ಮತ್ತು ವಿವಿಧ ದೇಶಭಕ್ತರ ಛದ್ಮವೇಶ ಧರಿಸಿ ಮೆರವಣಿಗೆಗೆ ರಂಗು ತುಂಬಿದರು.
ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಎನ್ ಎಮ್ ಎಮ್ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ಪ್ರತೀಕ್ಷ (D/o ಕುರಿಂಜ ಶ್ರೀ ಉದಯ ಕುಮಾರ್ ಮತ್ತು ಶ್ರೀಮತಿ ಸಾವಿತ್ರಿ) ಹಾಗೂ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ತಸ್ವಿನ್ ಆರ್ ಹೆಚ್ ( S/o ದರ್ಬೆ ಶ್ರೀ ರವಿ ಮತ್ತು ಶ್ರೀಮತಿ ಹರ್ಷಿಣಿ ಟಿ ಜಿ ) ಇವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.ಛದ್ಮವೇಶ ಧರಿಸಿದ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.
ಎಸ್ ಡಿ ಯಂ ಸಿ ಮಾಜಿ ಅಧ್ಯಕ್ಷ ವಸಂತ ಮಣಿಯಾಣಿ ಕೊಪ್ಪಳ ರವರ ಪ್ರಾಯೋಜಕತ್ವದಲ್ಲಿ ಹೊಸದಾಗಿ ದಾಖಲಾದ ಮಕ್ಕಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರ ಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ತಾರನಾಥ ರೈ ಸೇರ್ತಾಜೆ, ಕುಂಬ್ರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ದಾನಿಗಳಾದ ಸಂತೋಷ್ ಕುಮಾರ್ ಚೆಲ್ಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಬ್ರ ವಲಯದ ಮಾಜಿ ಅಧ್ಯಕ್ಷ ರಾಮಕೃಷ್ಣ ನಾಯ್ಕ್ ಮುಡಾಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ, ಶಾಲಾ ನಿವೃತ್ತ ಶಿಕ್ಷಕಿ ಶಂಕರಿ, ಹಿರಿಯ ವಿದ್ಯಾರ್ಥಿ ಕುಸುಮ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ, ಎಸ್ ಡಿ ಯಂ ಸಿ ಉಪಾಧ್ಯಕ್ಷೆ ರಾಜೇಶ್ವರಿ ಡಿ, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್ ಮಣಿಯಾಣಿ ಕೊಪ್ಪಳ, ತಾಯಂದಿರ ಸಮಿತಿ ಅಧ್ಯಕ್ಷೆ ಶಾರದಾ ಕೆ,ಹಾಗೂ ಎಸ್ ಡಿ ಯಂ ಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು. ದಾನಿಗಳ ನೆರವಿನಿಂದ ಮಧ್ಯಾಹ್ನದ ವಿಶೇಷ ಭೋಜನ ಹಾಗೂ ಸಿಹಿ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.










