ಕೊಂಬಾರು ಮಣಿಭಾಂಡ ಬಳಿ ಸ್ಕೂಟಿ ಮೇಲೆ ಮರ ಬಿದ್ದು ಸಹಪ್ರಯಾಣಿಕ ಗಂಭೀರ

0

ಕಡಬ: ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮಣಿಭಾಂಡ ಬಳಿ ಸ್ಕೂಟಿ ಮೇಲೆ ಏಕಾಏಕಿ ಮರವೊಂದು ಬಿದ್ದು, ಸಹಪ್ರಯಾಣಿಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.


ಮರ ಬಿದ್ದ ಪರಿಣಾಮ ಗಾಯ:
ಸ್ಕೂಟಿಯನ್ನು ವಿನೋದ್ ಹೊಳ್ಳಾರು ಅವರು ಚಾಲನೆ ಮಾಡುತ್ತಿದ್ದು, ಕೊಡೆಂಕಿರಿ ನಿವಾಸಿ ದಿವಾಕರ ಕೋಲ್ಕಜೆ ಅವರು ಸಹಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮಣಿಭಾಂಡ ಬಳಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಮರವೊಂದು ಸ್ಕೂಟಿ ಮೇಲೆ ಬಿದ್ದಿದೆ. ಘಟನೆಯಲ್ಲಿ ದಿವಾಕರ ಕೋಲ್ಕಜೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.


ಅಪಾಯಕಾರಿ ಮರಗಳ ತೆರವಿಗೆ ಒತ್ತಾಯ:
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳಿಂದ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ. ಮಣಿಭಾಂಡ ಸೇರಿದಂತೆ ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ತೆರವುಗೊಳಿಸುವಂತೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಘಟನೆಯ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here