







ಪುತ್ತೂರು: ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಮೇನಾಲ ಇದರ ರಕ್ಷಕ-ಶಿಕ್ಷಕ ಸಮಿತಿಯ ಅಧ್ಯಕ್ಷರಾಗಿ ಆಲಿಕುಂಞಿ ಅವರು ಪುನರಾಯ್ಕೆಗೊಂಡಿದ್ದಾರೆ.


ಉಪಾಧ್ಯಕ್ಷರುಗಳಾಗಿ ಫಾತಿಮಾ ಅಜೀಜ್ ಹಾಗೂ ಶಂಸುದ್ದೀನ್ ಆಯ್ಕೆಯಾದರು. ಸಮಿತಿಗೆ ಒಟ್ಟು ೨೦ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಶಿಕ್ಷಕರ ಪ್ರತಿನಿಧಿಗಳಿಂದ ಪುಷ್ಪಲತಾ ರಾವ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಕವಿತಾ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ವಿದ್ಯಾ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಸಮಿತಿ ಸದಸ್ಯರನ್ನು ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ ಅವರು ಹೂ ನೀಡಿ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು ನೂತನ ಸಮಿತಿಯು ಪರಸ್ಪರ ಸಹಕಾರ, ಏಕತೆ ಮತ್ತು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.



ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ರಾವ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರ ಪರಸ್ಪರ ಸಹಕಾರದ ಮಹತ್ವವನ್ನು ವಿವರಿಸಿದರು. ರಕ್ಷಕ-ಶಿಕ್ಷಕ ಸಮಿತಿಯ ಅಧ್ಯಕ್ಷ ಆಲಿಕುಂಞಿ ಮಾತನಾಡಿದರು. ಖದೀಜಾ ಸ್ವಾಗತಿಸಿದರು. ಉಮ್ಮುಲ್ಲೂರಾ ವಂದಿಸಿದರು. ಕುಮಾರಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ, ಅಡ್ಮಿನ್ ಆಫೀಸರ್ ನಾಸಿರ್, ವ್ಯವಸ್ಥಾಪಕಿ ಖದೀಜತ್ ರಹಿಯಾನಾ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.










