ಎನ್‌ಟಿಟಿಎಫ್‌ನಿಂದ ‘ಕಲಿಯುತ್ತಾ ಗಳಿಸಿ’ ಯೋಜನೆ – ಉದ್ಯೋಗಾಸಕ್ತ ಯುವಕ , ಯುವತಿಯರಿಗೆ ಸುವರ್ಣಾವಕಾಶ

0

ಪುತ್ತೂರು: ತಾಂತ್ರಿಕ ಶಿಕ್ಷಣ ಮತ್ತು ಉದ್ಯೋಗ ತರಬೇತಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಹೆಸರಾಗಿರುವ ನೆಟ್ಟೂರು ಟೆಕ್ನಿಕಲ್ ಟ್ರೈನಿಂಗ್ ಫೌಂಡೇಶನ್ ಯುವಜನತೆಗಾಗಿ ‘ಕಲಿಯುತ್ತಾ ಗಳಿಸಿ’ ಉದ್ಯೋಗಾಧಾರಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಎಲ್‌ಇಜಿಎಸ್ ( Learn, Earn, grow, success) ಕಾರ್ಯಕ್ರಮದಡಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೈಗಾರಿಕಾ ತರಬೇತಿಯೊಂದಿಗೆ ರಾಷ್ಟ್ರೀಯ ಮಾನ್ಯತೆ ಪಡೆದ ಡಿಪ್ಲೋಮಾ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ವಾರದಲ್ಲಿ 5 ದಿನಗಳು ಕೈಗಾರಿಕಾ ತರಬೇತಿ (ಪ್ರಾಯೋಗಿಕ ಕೆಲಸ) ಹಾಗೂ 1 ದಿನ ತರಬೇತಿ ಕೇಂದ್ರದಲ್ಲಿ ಥಿಯರಿ ತರಗತಿಗಳು ನಡೆಯಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ
ಮಾಸಿಕ ಸ್ಟೈಫಂಡ್ ರೂ. 15,000/- ದಿಂದ ರೂ. 17,000/- ವರೆಗೆ ಸಿಗಲಿದೆ..

ಸಮವಸ್ತ್ರ ,ಸೇಫ್ಟಿ ಶೂ ಮತ್ತು PPE (Personal Protective Equipment) ಕಿಟ್ ಮತ್ತು 1 ಲಕ್ಷ ರೂ ಆರೋಗ್ಯ ರಕ್ಷಣೆ ಮತ್ತು 7.5 ಲಕ್ಷ ರೂ ವೈಯಕ್ತಿಕ ಅಪಘಾತ ವಿಮೆಯು ಸಿಗಲಿದೆ. ಮಾತ್ರವಲ್ಲದೆ ,ಕೆಲಸದ ಅವಧಿಯಲ್ಲಿ ಸಬ್ಸಿಡಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ, ತಿಂಗಳಿಗೆ 1 ಕ್ಯಾಶುಯಲ್ ರಜೆ (CL) ಮತ್ತು ಹಬ್ಬದ ರಜಾ ಸೌಲಭ್ಯಗಳು ಇದೆ. ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುವುದು.

ಅರ್ಹತಾ ಮಾನದಂಡಗಳು:
10ನೇ ತರಗತಿ ಉತ್ತೀರ್ಣ, 12ನೇ ತರಗತಿ ಅಥವಾ ಐಟಿಐ (1 ವರ್ಷ ಮತ್ತು 2 ವರ್ಷಗಳ ಎಲ್ಲಾ ಟ್ರೇಡ್‌ಗಳು/ spot selection.
ವಯೋಮಿತಿ: 18 ರಿಂದ 24 ವರ್ಷ
ನೇರ ಸಂದರ್ಶನ: ಶನಿವಾರ 22 ಆಗಸ್ಟ್ 2026 ( ಬೆಳಿಗ್ಗೆ 11 ರಿಂದ)
ಸ್ಥಳ: ಪ್ರಗತಿ ಸ್ಟಡಿ ಸೆಂಟರ್ 2ನೇ ಮಹಡಿ, ಶ್ರೀ ಧರ್ಮಸ್ಥಳ ಬಿಲ್ಡಿಂಗ್, ಮೇನ್ ರೋಡ್, ಪುತ್ತೂರು.

LEAVE A REPLY

Please enter your comment!
Please enter your name here