







ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿದ್ಯಾಮಾತಾ ಅಕಾಡೆಮಿ ಹಾಗೂ ನಂದಗೋಕುಲ ಚಿಣ್ಣರ ಅಂಗಳ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಕೃಷ್ಣ ವೇಷ ಮತ್ತು ಯಶೋದೆ ಕೃಷ್ಣ ಸ್ಪರ್ಧೆಯನ್ನು ಆ.30 ಭಾನುವಾರ ಬೆಳಿಗ್ಗೆ 10 ಗಂಟೆಗೆ ಎಪಿಎಂಸಿ ರಸ್ತೆಯ ವಿದ್ಯಾಮಾತಾ ಅಕಾಡೆಮಿ ಆವರಣದಲ್ಲಿ ಆಯೋಜಿಸಲಾಗಿದೆ.


ವಿಭಾಗಗಳು:
ವಿಭಾಗ 1: 1 ರಿಂದ 3 ವರ್ಷದೊಳಗಿನ ಮಕ್ಕಳಿಗೆ (ಕೃಷ್ಣ ವೇಷ)ವಿಭಾಗ 2: 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ (ಕೃಷ್ಣ ವೇಷ)ವಿಭಾಗ 3: 1 ರಿಂದ 6 ವರ್ಷದೊಳಗಿನ ಮಕ್ಕಳ ತಾಯಂದಿರಿಗೆ (ಯಶೋದೆ ಕೃಷ್ಣ ಸ್ಪರ್ಧೆ)
ಬಹುಮಾನ:
ಪ್ರತಿ ವಿಭಾಗಕ್ಕೆ ಪ್ರತ್ಯೇಕವಾಗಿ ಪ್ರಥಮ ₹3,000, ದ್ವಿತೀಯ ₹2,000, ತೃತೀಯ ₹1,000. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಲಾಗುವುದು.



ಸ್ಪರ್ಧೆಗೆ ಬರುವಾಗ ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಒಂದು ಭಾವಚಿತ್ರ ಕಡ್ಡಾಯ. ಆ.28 ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8590773486.










