ಬೆಟ್ಟಂಪಾಡಿ: ಸಿಡಿಲು ಬಡಿದು ಮನೆಗೆ ಹಾನಿ, ಮಿಂಚುಳ್ಳಿ ಹಕ್ಕಿಯ ದುರ್ಮರಣ

0


ಬೆಟ್ಟಂಪಾಡಿ: ಇಲ್ಲಿನ ಕೇಕನಾಜೆ ನಿವಾಸಿ ಬಟ್ಯಪ್ಪ ರೈಯವರ ಮನೆಯ ಪಕ್ಕ ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಗೂ ಹಾನಿಯಾಗಿರುವ ಘಟನೆ ಆ. 25 ರಂದು ಮಧ್ಯಾಹ್ನ ನಡೆದಿದೆ.



ಮನೆಯ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಹಾನಿಗೊಳಗಾಗಿದೆ.ಮೀಟರ್ ಬೋರ್ಡ್ ಕಿತ್ತು ಹೋಗಿದೆ. ಮನೆಯ ಗೋಡೆಗಳು ಅಲ್ಲಲ್ಲಿ ಒಡೆದು ಹೋಗಿವೆ. ಹಂಚುಗಳು ಒಡೆದು ಮೇಲ್ಛಾವಣಿ ಹಾನಿಗೊಳಗಾಗಿದೆ. ಮನೆಯ ಗೋಡೆಯಲ್ಲಿ ವಯರಿಂಗ್ ಹಾದು ಹೋಗಿರುವಂತೆ ಗೋಡೆಗಳು ಭಾಗಗೊಂಡಿವೆ.



ಅದೃಷ್ಟವಶಾತ್ ಮನೆಯವರು ಪಾರು
ಮನೆಯ ಯಜಮಾನ ಬಟ್ಯಪ್ಪ ರೈಯವರು ಸಿಡಿಲು ಬಡಿಯುವ ವೇಳೆ ಮನೆಯಲ್ಲಿ ಇರಲಿಲ್ಲ. ಹಾಗಾಗಿ ಯಾವುದೇ‌ ಜೀವ ಅಪಾಯ ಸಂಭವಿಸಿಲ್ಲ.

ಮಿಂಚುಳ್ಳಿ ಹಕ್ಕಿ ಸಾವು
ಸಿಡಿಲಿನ ಪ್ರಭಾವಕ್ಕೆ ಮಿಂಚುಳ್ಳಿ ಹಕ್ಕಿಯೊಂದು ಪ್ರಾಣ ಕಳೆದುಕೊಂಡಿದೆ. ಅದರ ಕಾಲುಗಳು ಕಿತ್ತೆಸೆದಂತೆ ರೆಕ್ಕೆಗಳು ಚದುರಿಹೋಗಿರುವುದು ಘಟನೆಗೆ ಸಾಕ್ಷಿ ನೀಡುತ್ತಿದೆ.

LEAVE A REPLY

Please enter your comment!
Please enter your name here