






ಉಪ್ಪಿನಂಗಡಿ: ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರು ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶ್ರೀರಾಮ ಶಾಲೆ ವೇದಶಂಕರನಗರ ಉಪ್ಪಿನಂಗಡಿಯ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.


14ರ ವಯೋಮಾನದ ವಿಭಾಗ:ತಸ್ಮಯ್ (8ನೇ) – ಸಾಂಪ್ರದಾಯಿಕ ಯೋಗಾಸನ – ದ್ವಿತೀಯ,ಶಿವಪ್ರಸಾದ್ (8ನೇ) – ಆರ್ಟಿಸ್ಟಿಕ್ ಸಿಂಗಲ್ – ತೃತೀಯ,ಶಿವಪ್ರಸಾದ್ ಮತ್ತು ತಸ್ಮಯ್ – ಆರ್ಟಿಸ್ಟಿಕ್ ಪೇರ್ – ತೃತೀಯ,17ರ ವಯೋಮಾನದ ವಿಭಾಗ:ರಂಜನ್ (10ನೇ) ಮತ್ತು ವೈಭವ್ ಬಿ. ಶೆಟ್ಟಿ (9ನೇ) – ರಿದಮಿಕ್ ಪೇರ್ – ತೃತೀಯ,ಹರ್ಷಿತ್ (9ನೇ) – ಆರ್ಟಿಸ್ಟಿಕ್ ಸಿಂಗಲ್ – ತೃತೀಯ,ಹಿತಾ ಶೆಟ್ಟಿ (9ನೇ) – ಆರ್ಟಿಸ್ಟಿಕ್ ಸಿಂಗಲ್ – ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀರಾಮ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದೆ.













