ಚಿಗುರು ಸಂಜೀವಿನಿ ಒಕ್ಕೂಟ ಕೊಳ್ತಿಗೆಯ ವಾರ್ಷಿಕ ಮಹಾಸಭೆ

0

ಪುತ್ತೂರು: ಚಿಗುರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಳ್ತಿಗೆ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.1ರಂದು ನಡೆಯಿತು.ಒಕ್ಕೂಟದ ಅಧ್ಯಕ್ಷೆ ನಳಿನಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಬೆಳ್ಳಾರೆ ಗ್ರಾಮಾಂತರ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಮಾತನಾಡಿ, ಮಾದಕ ವ್ಯಸನವು ಒಂದು ಸಣ್ಣ ಪ್ರಾಯದ ಮಕ್ಕಳಲ್ಲಿ ಜಾಸ್ತಿಯಾಗಿ ಕಂಡು ಬರುವ ಚಟವಾಗಿದೆ.ಈ ಮಾದಕ ವ್ಯಾಸನಗಳಿಗೆ ಹೆಚ್ಚಾಗಿ ಸಣ್ಣ ಪ್ರಾಯದವರೇ ಬಲಿಯಾಗುತ್ತಾರೆ.ಇಂತಹ ಚಟಗಳಿಗೆ ಯಾರು ಬಲಿಯಾಗದಂತೆ ನಾವೆಲ್ಲ ಎಚ್ಚರವಹಿಸಬೇಕು. ಇಂತಹ ಚಟಗಳಿಗೆ ಮಕ್ಕಳು ಬಲಿಯಾಗದಂತೆ ಮಹಿಳೆಯರಾದ ನಾವುಗಳು ಕೂಡ ತಿಳಿ ಹೇಳಬೇಕು.ಸಂಜೀವಿನಿ ಒಕ್ಕೂಟದ ಮೂಲಕ ವೇದಿಕೆಯನ್ನು ಕಲ್ಪಿಸಿ ಕೊಟ್ಟಾಗ ಜನರಿಗೆ ಉತ್ತಮ ಮಾಹಿತಿಗಳು ಸಿಗುತ್ತದೆ. ಸಂಜೀವಿನಿ ಒಕ್ಕೂಟಗಳು ಇಂತಹ ಒಳ್ಳೆಯ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

FLCRP ಗೀತಾ ಬ್ಯಾಂಕ್ ಲಿಕೇಜ್ ನ ಬಗ್ಗೆ ಬ್ಯಾಂಕ್ ವ್ಯವಹಾರ ಮತ್ತು ವಿಮೆಯ ಬಗ್ಗೆ ವಿವರಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಬ್ಯಾಂಕ್ ಖಾತೆಯನ್ನು ಚಲಾವಣೆ ಮಾಡಬೇಕಾದರೆ ಆದಾಯವನ್ನು ಹೆಚ್ಚಿಸುವಂತೆ ಯೋಚಿಸಬೇಕು ಇದಕ್ಕಾಗಿ ನಾವು ಆದಾಯ ಬರುವಂತಹ ಅಂತರ್ ಬೆಳೆಗಳನ್ನು ಬೆಳೆಸಬೇಕು. ಇದಕ್ಕಾಗಿ ಇಲಾಖೆಯಿಂದ ಅಂತರ್ ಬೆಳೆಗಳಿಗೆ ಪ್ರೋತ್ಸಾಹ ಧನವನ್ನು ನೀಡುತ್ತೇವೆ ಈ ಬೆಳೆಗಳಿಗೆ ಕೊಳೆರೋಗ ನಿಯಂತ್ರಣ ಮಾಡಲು ಬ್ರೋಣೊ ದ್ರಾವಣವನ್ನು ಸಿಂಪಡಿಸಬೇಕು ಕೃಷಿ ಹೊಂಡ ಯಂತ್ರೋಪಕರಣ ಖರೀದಿಗೆ ನಮ್ಮ ಇಲಾಖೆಯಿಂದ ಸಹಾಯಧನವನ್ನು ನೀಡುತ್ತೇವೆ ಎಂದು ಮಾಹಿತಿ ತಿಳಿಸಿದರು.ಜೇನು ಕೃಷಿ ಮತ್ತು ಮಲ್ಲಿಗೆ ಕೃಷಿ ಮಾಡಲು ಆಸಕ್ತಿ ಇರುವ ಮಹಿಳೆಯರಿಗೆ ನಮ್ಮ ಇಲಾಖೆಯಿಂದ ತರಬೇತಿಯನ್ನು ನೀಡುತ್ತೇವೆ ಹಾಗೂ ಮಲ್ಲಿಗೆ ಕೃಷಿಯನ್ನು ನಮ್ಮ ಮನೆಯ ಟೆರೆಸ್ ನ ಮೂಲಕ ಬೆಳೆಸಿ ಆದಾಯವನ್ನು ಗಳಿಸಬಹುದು ಎಂದು ಉತ್ತಮ ರೀತಿಯ ಮಾಹಿತಿಗಳನ್ನು ತಿಳಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ವಲಯ ಮೇಲ್ವಿಚಾರಕಿ ಸುವಿನ ಅವರು NRLM ಯೋಜನೆಯ ಬಗ್ಗೆ ಮಾಹಿತಿಗಳನ್ನು ತಿಳಿಸಿದರು ಹಾಗೂ ಗ್ರಾಮ ಪಂಚಾಯತ್ ಮತ್ತು ಚಿಗುರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ )ಕೊಳ್ತಿಗೆ ಇದರ ಸಹಭಾಗಿತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವು ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷೆ ನಳಿನಿ ಮಾತನಾಡಿ, ಸಂಜೀವಿನಿ ಎಂದರೆ ಸಾಲ ಕೊಡುವ ಅಥವಾ ಉಳಿತಾಯ ಮಾಡುವ ಸಂಸ್ಥೆಯಲ್ಲ ಇದು ನಮ್ಮ ಬದುಕಿಗೆ ಮರು ಜೀವ ನೀಡುವ ಬೀಜವಾದ ಸಂಜೀವಿನಿ ನಮ್ಮ ಸಂಜೀವಿನಿ ಸಂಘದ ಮುಖ್ಯ ಉದ್ದೇಶ ಮಹಿಳೆಯರು ಸಬಲೀಕರಣ ಆಗಬೇಕು ಮತ್ತು ಸ್ವಾವಲಂಬಿಗಳಾಗಿ ಬದುಕಬೇಕು ಎಂದರು.

ಉತ್ತಮ ಸಂಘವನ್ನು ಗುರುತಿಸಿ ಆ ಸಂಘಕ್ಕೆ ಬಹುಮಾನ ವಿತರಿಸಲಾಯಿತು ಹಾಗೂ ಅತೀ ಹೆಚ್ಚು ಸಾಲ ಪಡೆದು ಸ್ವ ಉದ್ಯೋಗ ಮಾಡುತ್ತಿರುವ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಘನ ತ್ಯಾಜ್ಯ ಘಟಕ ಸಿಬ್ಬಂದಿಗಳಿಗೆ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಪ್ರಕಾಶ್ ಹಾಗೂ ಸಭೆಯಲ್ಲಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯಾರು, ಅಂಗನವಾಡಿ ಕಾರ್ಯಕರ್ತೆ ಯಾರು, ಒಕ್ಕೂಟ ಸಿಬ್ಬಂದಿಗಳು ಪಂಚಾಯತ್ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಒಕ್ಕೂಟದ ಸಿಬ್ಬಂದಿಗಳು ಪ್ರಾರ್ಥಿಸಿದರು. ಕೃಷಿಸಖಿ ಗೀತಾ ವಂದಿಸಿದರು. ಕಾರ್ಯಕ್ರಮವನ್ನು LCRP ಶೃತಿ ನಿರೂಪಿಸಿದರು.

LEAVE A REPLY

Please enter your comment!
Please enter your name here