ಪುತ್ತೂರು ಮಾಯ್ ದೆ ದೇವುಸ್ ಹಿ. ಪ್ರಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಪುತ್ತೂರು: ಪುತ್ತೂರು ಮಾಯ್ ದೆ ದೇವುಸ್ ಹಿ. ಪ್ರಾ. ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆಯ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಶಾಲಾ ರಕ್ಷಕ ಶಿಕ್ಷಕ ಸಂಘ, ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮಾಯ್ ದೆ ದೇವುಸ್ ಹಿ. ಪ್ರಾ. ಶಾಲೆಯ ಸಭಾಂಗಣದಲ್ಲಿ ಸೆ.3ರಂದು ಆಚರಿಸಲಾಯಿತು.

ವಿದ್ಯಾರ್ಥಿಗಳ ಪ್ರಾರ್ಥನಾ ವಿಧಿಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ಅತಿ ವಂ. ಡಾ| ಜೆ.ಬಿ. ಸಲ್ಡಾನ್ಹ ಮಾತನಾಡಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಹಿನ್ನೆಲೆಯನ್ನು ವಿವರಿಸಿ ರಾಧಾಕೃಷ್ಣನ್‌ರವರ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲಾ ಶಿಕ್ಷಕರನ್ನು ಗೌರವಿಸಿ ಎಂದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜಯಂತ ಉರ್ಲಾಂಡಿ ಮಾತನಾಡಿ ಶುಭಹಾರೈಸಿದರು.


ಗೌರವಾಪಣೆ:
ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಸಂಚಾಲಕರಿಗೆ, ಸಹಾಯಕ ಧರ್ಮಗುರುಗಳಿಗೆ, ಶಾಲಾ ಮುಖ್ಯ ಶಿಕ್ಷಕಿ ಜಾನೆಟ್‌ ಡಿಸೋಜ ಹಾಗೂ ಹಿರಿಯ ಶಿಕ್ಷಕ ಸುಬ್ಬರಾಜ ಶಾಸ್ತ್ರೀಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಬಳಿಕ ಶಿಕ್ಷಕರಿಗಾಗಿ ಆಯೋಜಿಸಿದ ಅದೃಷ್ಟದ ಆಟಗಳಿಗೆ ಬಹುಮಾನ ವಿತರಣೆ ಹಾಗೂ ಶಿಕ್ಷಕರಿಗೆ ಹೂ ನೀಡಲಾಯಿತು.


ಶಾಲಾ ವತಿಯಿಂದ ಸಂಚಾಲಕರು ಶಿಕ್ಷಕರಿಗೆ ಕಿರುಕಾಣಿಕೆಗಳನ್ನು ನೀಡಿದರು. ಮುಖ್ಯ ಶಿಕ್ಷಕಿ ಜಾನೆಟ್‌ ಡಿಸೋಜ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ತಿಳಿಸಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಸಹಕರಿಸಿದ ಶಿಕ್ಷಕರಿಗೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.


ಪ್ರತಿ ತರಗತಿಯ ನಾಯಕರು ತಮ್ಮ ತರಗತಿಯ ಶಿಕ್ಷಕರಿಗೆ ಹೂ ನೀಡಿ ಗೌರವಿಸಿದರು. ಶಾಲಾ ವಿದ್ಯಾರ್ಥಿ ಜಿತೇಶ್ ಕೃಷ್ಣ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಸಾರಿದರೆ, ವಿದ್ಯಾರ್ಥಿಗಳು ಶುಭಾಶಯ ಗೀತೆ ಹಾಡಿದರು. ಶಾಲಾ ವಿದ್ಯಾರ್ಥಿಗಳು ಸ್ವಾಗತಿಸಿದರು. ಸಜ್ನ ಸಿಝ. ಅಮೈರ ಖಾನಂ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here