






ನರಿಮೊಗರು :ಶ್ರೀ ಕೃಷ್ಣ ಭಗವಂತನ ಆರಾಧನೆ ಎಂದರೆ ಆತನ ಗುಣಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳುವುದೇ ಆಗಿದೆ. ಭಗವಂತನ ಮಾತೇ ಭಗವದ್ ಗೀತೆ. ಆತನ ಮಾತಿನಲ್ಲಿ ನಂಬಿಕೆ ಇಡುವುದಾದರೆ ಗೀತೆಯಲ್ಲಿ ಹೇಳಿದಂತೆ ಸಮಸ್ತ ಜೀವಿಗಳಲ್ಲಿ ಭಗವಂತನಿದ್ದಾನೆ. ಆದ್ದರಿಂದ ಜೀವ ಸಹಾನುಭೂತಿಯೇ ಭಗವಂತನ ದಾರಿ.ಲೋಕದ ಯಾವುದನ್ನೂ ಅಂಟಿಸಿಕೊಳ್ಳದ ಕೃಷ್ಣ ನಮ್ಮ ಬದುಕಿನ ದಾರಿದೀಪ ಎಂದು ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಹೇಳಿದರು.


ಅವರು ಸಂಸ್ಥೆಯಲ್ಲಿ ಕೃಷ್ಣಲೋಕ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.



ಸಂಸ್ಥೆಯ ಶಿಕ್ಷಕ ರಕ್ಷಕ ಸಂಘ ದ ಅಧ್ಯಕ್ಷ ಸುರೇಶ್ ಪ್ರಭು ಸೊರಕೆ ಶುಭ ಹಾರೈಸಿದ ರು. ಶಾಲಾ ಸುರಕ್ಷತಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಗ್ರಿತ್ತಾಯ ಬಹುಮಾನ ವಿತರಿಸಿದರು.ಶಿಶುಮಂದಿರದ ವಿದ್ಯಾರ್ಥಿಗಳ ರಾಧಾ – ಕೃಷ್ಣ ವೇಷ ಪ್ರದರ್ಶನದಲ್ಲಿ ನೂರಕ್ಕೂ ಅಧಿಕ ಪುಟಾಣಿ ಗಳು ಭಾಗವಹಿಸಿದರು. ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್ ದೀಪ ಪ್ರಜ್ವಲನೆ ಮಾಡಿದರು.
ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮುಖ್ಯಗುರು ಅಖಿಲಾ, ಉಪ ಮುಖ್ಯಗುರು ದಿವ್ಯಾ, ಶಾಲಾ ಶಿಕ್ಷಣ ಸಂಯೋಜಕಿ ಶ್ರೀ ಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಶು ಮಂದಿರದ ವಿದ್ಯಾರ್ಥಿಗಳಿಂದ ಕೃಷ್ಣ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ವಿದ್ಯಾರ್ಥಿಗಳಿಗೆ ಹಗ್ಗ ಜಗ್ಗಾಟ ಮತ್ತು ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರನ್ನು ವಿದ್ಯಾರ್ಥಿಗಳು ಗೌರವಿಸಿದರು. ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಧನುಷಾ, ಸುಜನ್,ಧನ್ವಿ ಕಾರ್ಯಕ್ರಮ ನಿರ್ವಹಿಸಿದರು.










