ಉಪ್ಪಿನಂಗಡಿಯಲ್ಲಿ ಮೊಸರು ಕುಡಿಕೆಯ ಶೋಭಾಯಾತ್ರೆ

0

ಉಪ್ಪಿನಂಗಡಿ: ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ಸೆ.5ರಂದು ಮೊಸರು ಕುಡಿಕೆ ಉತ್ಸವದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.


ಈ ಸಂದರ್ಭ ಪೇಟೆಯಲ್ಲಿ ಅಲ್ಲಲ್ಲಿ ಕಟ್ಟಲಾಗಿದ್ದ ಅಟ್ಟಿ ಮಡಿಕೆಯನ್ನು ಯುವಕರು ಪಿರಮಿಡ್ ಮೂಲಕ ಹತ್ತಿ ಒಡೆದು ಸಂಭ್ರಮಿಸಿದರು. ಬೆಳಗ್ಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಜರಗಿದವು. ಕುಣಿತ ಭಜನಾ ತಂಡಗಳು, ಚೆಂಡೆ, ರಾಧಾ, ಕೃಷ್ಣ ವೇಷಧಾರಿಗಳು ಶೋಭಾಯಾತ್ರೆಗೆ ಮೆರುಗು ತಂದವು.


ಕಾರ್ಯಕ್ರಮದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಅತ್ರಮಜಲು, ಕಾರ್ಯದರ್ಶಿ ಸಂತೋಷ್ ಅಡೆಕ್ಕಲ್, ಉಪಾಧ್ಯಕ್ಷರಾದ ತಿಮ್ಮಪ್ಪ ಇಳಂತಿಲ, ಪ್ರತಾಪ್ ಪೆರಿಯಡ್ಕ, ಹೊನ್ನಪ್ಪ ಗೌಡ ವರೆಕ್ಕ, ವಿಶ್ವ ಹಿಂದೂ ಪರಿಷತ್, ಭಜರಂಗದಳದ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್, ಪ್ರಮುಖರಾದ ಸುನೀಲ್ ಕುಮಾರ್ ದಡ್ಡು, ರಾಮಚಂದ್ರ ಮಣಿಯಾಣಿ, ಕೈಲಾರು ರಾಜಗೋಪಾಲ ಭಟ್ ಸೇರಿದಂತೆ ವಿಶ್ವಹಿಂದೂ ಪರಿಷತ್, ಭಜರಂಗದಳ, ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here