






ಸವಣೂರು : ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನಬಾರ್ಡ್ ಆಶ್ರಯದಲ್ಲಿ ಸವಣೂರು ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು-ಜಾಗೃತಿ ಕಾರ್ಯಕ್ರಮ ಸೆ.5ರಂದು ನಡೆಯಿತು.


ಕೇಂದ್ರ ಸಹಕಾರಿ ಬ್ಯಾಂಕಿನ ನಿರೀಕ್ಷಕಿ ಮಾಲಾ ಮಾತನಾಡಿ,ಬ್ಯಾಂಕ್ಗಳು ಗ್ರಾಹಕರಿಗೆ ಸಾಲ ನೀಡಲು ಮಾತ್ರ ಸೀಮಿತವಾಗಿಲ್ಲ. ಪ್ರಸಕ್ತ ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ವ್ಯವಸ್ಥೆಯಡಿ ಬ್ಯಾಂಕ್ಗಳು ಗ್ರಾಹಕರಿಗೆ ಹಲವು ಯೋಜನೆ ತಲುಪಿಸುವ ಕೆಲಸ ಮಾಡುತ್ತಿವೆ.ಗ್ರಾಹಕರು ಆನ್ಲೈನ್ ವಂಚನೆಗಳ ಕುರಿತು ಎಚ್ಚರವಹಿಸಬೇಕು ಎಂದರು.



ಕೇಂದ್ರ ಸಹಕಾರಿ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ರೂ.20,000 ಉಳಿತಾಯವಿದ್ದವರಿಗೆ ಉಚಿತ ವಿಮೆ ಯೋಜನೆ ಜಾರಿಯಲ್ಲಿದೆ ಎಂದರು.
ಸವಣೂರು ಪ್ರಾ.ಕೃ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ.ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸೇವೆಗಳು ಹಾಗೂ ಸಿಬಂದಿಗಳ ಸ್ಪಂದನಾಶೀಲ ಕಾರ್ಯವೈಖರಿ ಶ್ಲಾಘನೀಯ.ದೇಶಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಗಿದೆ.ನಮ್ಮ ಜಿಲ್ಲೆ ಹಲವು ಬ್ಯಾಂಕ್ಗಳ ತವರೂರು ಎಂದರು.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಗುರುತಿಸಿಕೊಂಡಿದೆ.ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ದಕ್ಷ ಆಡಳಿತದಿಂದ ಇಂದು ಅವಿಭಜಿತ ದ.ಕ.ಜಿಲ್ಲೆಯಲ್ಲಿ ನೂರಾರು ಶಾಖೆಗಳನ್ನು ತೆರೆಯುವ ಮೂಲಕ ಗ್ರಾಮ ಗ್ರಾಮಕ್ಕೆ ಸೇವೆ ವಿಸ್ತರಿತವಾಗಿದೆ ಎಂದರು.
ಚಾರ್ವಾಕ ಪ್ರಾ.ಕ.ಪ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಈಗ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದು,ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ.ಸಿಬಂದಿಗಳೂ ಜನರೊಂದಿಗೆ ಉತ್ತಮವಾಗಿ ವ್ಯವಹರಿಸುತ್ತಾರೆ ಎಂದರು.ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಹಕಾರಿಗಳಿಗೆ ಗುರುವಾಗಿ ಮಾರ್ಗದರ್ಶನ ನೀಡುವ ಮೂಲಕ ಬ್ಯಾಂಕ್ ಹಾಗೂ ಗ್ರಾಹಕರನ್ನು ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಲೀಡ್ ಬ್ಯಾಂಕಿನ ಎಫ್.ಎಲ್.ಸಿ.ಗೀತಾ ವಿಜಯ್ ಅವರು ಮಾಹಿತಿ ನೀಡಿ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಣಕಾಸು ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ಗಳ ಮೂಲಕ ಲಭ್ಯವಿದೆ. ಗ್ರಾಹಕರು ಬ್ಯಾಂಕ್ನೊಂದಿಗೆ ನಿರಂತರ ವ್ಯವಹಾರ ಇಟ್ಟುಕೊಳ್ಳುವುದರಿಂದ ಗೊಂದಲ/ಸಮಸ್ಯೆ ನಿವಾರಿಸಲು ಸಾಧ್ಯ ,ಜತೆಗೆ ವೈಯಕ್ತಿಕ ಹಾಗೂ ಕೃಷಿಕರು ಬೆಳೆವಿಮೆಗಳನ್ನೂ ಮಾಡುವ ಮೂಲಕ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಎಲ್ಲರೂ ಆರ್ಥಿಕ ಸಾಕ್ಷರತೆ ಹೊಂದಬೇಕು.ತಾಂತ್ರಿಕತೆಯ ಬಗ್ಗೆ ಅರಿವು , ಸೈಬರ್ ವಂಚಕರ ಬಗ್ಗೆ ಜಾಗರೂಕರಾಗಿರಬೇಕು.ಆರ್ಥಿಕವಾಗಿ ಹೂಡಿಕೆ ಮಾಡುವ ಬಗ್ಗೆ ವಿವರವಾಗಿ ತಿಳಿಸಿ ಬ್ಯಾಂಕಿನ ಗ್ರಾಹಕರು ಕೈವೈಸಿ ಮಾಡುವ ಮೂಲಕ ಸರಕಾರದ ಸವಲತ್ತುಗಳನ್ನು ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮಾತನಾಡಿ , ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗ್ರಾಮಿಣ ಭಾಗದ ಜನತೆಗೆ ಪರಭಾಷಿಕ ಸಿಬ್ಬಂದಿಗಳೊಂದಿಗೆ ಸಂವಹನ ಮಾಡಿ ವ್ಯವಹರಿಸುವುದು ಕಷ್ಟಕರವಾಗಿರುವ ಸಮಯದಲ್ಲಿ ಡಿಸಿಸಿ ಬ್ಯಾಂಕ್ನ ಸವಣೂರು ಶಾಖೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ.ಸವಣೂರಿನಂತಹ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕಿಗಿಂತ ಸಹಕಾರಿ ಸಂಸ್ಥೆಗಳ ಸೇವೆ ಉತ್ತಮವಾಗಿರುವ ಕಾರಣದಿಂದ ಈ ಭಾಗದ ಜನರ ಆರ್ಥಿಕಾಭಿವೃದ್ಧಿಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಾಜೀವಿ ವಿ. ಶೆಟ್ಟಿ, ಸುಂದರಿ ಬಿ.ಎಸ್,ನವೋದಯ ಸ್ವಸಹಾಯ ಸಂಘಗಳ ಪ್ರೇರಕರಾದ ಪ್ರೇಮಾ ಕೆಡೆಂಜಿ, ಕಲ್ಪವಲ್ಲಿ ಕೆದಿಲಾಯ ಹಾಗೂ ಬ್ಯಾಂಕಿನ ಗ್ರಾಹಕರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸವಣೂರು ಶಾಖಾ ವ್ಯವಸ್ಥಾಪಕಿ ಜಯಂತಿ ನಾಗೇಶ್ ಅವರು ಸ್ವಾಗತಿಸಿದರು. ಸಿಬ್ಬಂದಿಗಳಾದ ದಿನೇಶ್ ಎಂ.ವಂದಿಸಿದರು. ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.ಶಿವರಂಜಿನಿ,ಶೋಭಾ ಬಾಲಚಂದ್ರ ರೈ ,ನಿತ್ಯನಿಧಿ ಸಂಗ್ರಾಹಕ ಬಾಲಚಂದ್ರ ರೈ ಕೆರೆಕ್ಕೋಡಿ ಸಹಕರಿಸಿದರು.










