ರಾಮಕುಂಜ ಆ.ಮಾ.ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಭಾರತರತ್ನ ಸರ್ವೇಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಆಚರಿಸಲಾಯಿತು.


ಸಂಸ್ಥೆಯ ಕಾರ್ಯದರ್ಶಿ ಸೇಸಪ್ಪ ರೈಯವರು ಪುಷ್ಪಾರ್ಚನೆಗೈದು, ಶಿಕ್ಷಕರ ಕರ್ತವ್ಯ ಹಾಗೂ ಜವಾಬ್ದಾರಿಯ ಬಗ್ಗೆ ಸಂಸ್ಥೆಯ ಶಿಕ್ಷಕರಿಗೆ ಅರಿವು ಮೂಡಿಸುತ್ತಾ ವಿದ್ಯಾರ್ಥಿಗಳು ಕ್ರೌರ್ಯವನ್ನು ತೊರೆದು ವಿಶ್ವೇಶ ತೀರ್ಥರ ಸಾಧು ಸ್ವಭಾವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಬೆಳೆಯಬೇಕು ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ, ಸಂಸ್ಥೆಯ ಮುಖ್ಯಗುರುಗಳು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಣಿತ, ಭುವನ್ ಪಟೇಲ್, ಸಂತೋಷ್ ಇವರು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಸಂಸ್ಥೆಯ ಶಿಕ್ಷಕ- ಶಿಕ್ಷಕೇತರ ವೃಂದದವರಿಗೆ ವಿವಿಧ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಹತ್ತನೇ ತರಗತಿಯ ಮಾನ್ಯಶ್ರೀ ಪಿ.ಯನ್., ರಿತಿಕಾ ಭಟ್, ಸುಜ್ಞಾ, ಮಿಲನ್ ದಿನೇಶ್ ಪೂಜಾರಿ, ಅನಿಕೇತ್ ಹಾಗೂ ಶಾಲಾ ಸಂಸತ್ತಿನ ನಾಯಕರು ಕಾರ್ಯಕ್ರಮ ನಿರ್ವಸಿದರು. ಹತ್ತನೇ ತರಗತಿಯ ಅನಿರುದ್ದ್ ಸ್ವಾಗತಿಸಿ, 7ನೇ ತರಗತಿಯ ಆರಾಧ್ಯ ಆರ್.ಕೆ.ವಂದಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ಸಂಯೋಜಿಸಿ, ಸಂಭ್ರಮಿಸಿದರು.

LEAVE A REPLY

Please enter your comment!
Please enter your name here