






ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸ್ವರ್ಣ ವತಿಯಿಂದ ಸೆ.9 ರಂದು ಶಿಕ್ಷಕರ ದಿನಾಚರಣೆಯನ್ನು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು.


ರೋಟರಿ ಪಿಡಿಜಿ ರಂಗನಾಥ್ ಭಟ್ ಮಾತನಾಡಿ, ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಹಾಗೂ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವಲ್ಲಿಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಉತ್ತಮ ಶಿಕ್ಷಣವಿದ್ದಾಗ ಯಾರೇ ಆಗಲಿ ಸಮಾಜದ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದರು.



ಅಧ್ಯಕ್ಷತೆ ವಹಿಸಿದ ರೋಟರಿ ಸ್ವರ್ಣ ಅಧ್ಯಕ್ಷೆ ಶ್ರೀಮತಿ ಆಶಾ ಮರಿಯ ರೆಬೆಲ್ಲೋ ಮಾತನಾಡಿ, ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳು ಇಂದು ಉತ್ತಮ ವ್ಯವಸ್ಥೆಗೆ ತಲುಪಬೇಕಾದರೆ ಶಿಕ್ಷಕರ ಪ್ರಯತ್ನ ಖಂಡಿತಾ ಇದೆ ಅಂದಾಗ ಶಿಕ್ಷಕರಾದ ನಮಗೆ ಬಹಳ ಖುಶಿಯಾಗುತ್ತದೆ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜ ಮಾತನಾಡಿ, ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯಂದು ಗೌರವಿಸಿದಾಗ ಸಮಾಜವು ಅಂತಹ ಶಿಕ್ಷಕರನ್ನು ಗುರುತಿಸಿದಂತಾಗುತ್ತದೆ. ಮಕ್ಕಳ ಆರೋಗ್ಯ ವೃದ್ಧಿಯತ್ತ, ಪ್ರತಿಭೆ ಗುರುತಿಸುವತ್ತ. ಹಾಗೂ ಮಕ್ಕಳಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾದಾಗ ಮಾನವ ಸಂಪನ್ಮೂಲದ ಅಭಿವೃದ್ಧಿ ಆಗುತ್ತದೆ ಎಂದರು.

ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ, ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೀನಾಕ್ಷಿ ಗೌಡ ಪ್ರಾರ್ಥಿಸಿದರು. ಕ್ಲಬ್ ಪೂರ್ವಾಧ್ಯಕ್ಷರಾದ ಭಾಸ್ಕರ ಕೋಡಿಂಬಾಳ ಸ್ವಾಗತಿಸಿ, ವೆಂಕಟ್ರಮಣ ಗೌಡ ಕಳುವಾಜೆ ವಂದಿಸಿದರು.
ಕಾರ್ಯದರ್ಶಿ ಸಂಧ್ಯಾ ಬೈಲಾಡಿ ವಾರದ ವರದಿ ಮಂಡಿಸಿದರು. ಪೂರ್ವಾಧ್ಯಕ್ಷರಾದ ಮಹಾಬಲ ಗೌಡ, ಸುರೇಶ್ ಪಿ ಅಭಿನಂದಿತ ಶಿಕ್ಷಕರ ಹೆಸರನ್ನು ವಾಚಿಸಿದರು. ಅಭಿನಂದಿತ ಶಿಕ್ಷಕರ ಪೈಕಿ ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಾನೆಟ್ ಡಿ’ಸೋಜ, ವಿಶ್ರಾಂತ ಮುಖ್ಯ ಶಿಕ್ಷಕ ನಾರಾಯಣ ಉಪ್ಪಳಿಗೆ ರವರು ಅನಿಸಿಕೆ ವ್ಯಕ್ತಪಡಿಸಿದರು.
ಸದಸ್ಯ ವಿಜಯ್ ಡಿ’ಸೋಜ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸದಸ್ಯರಾದ ರಾಮಣ್ಣ ರೈ ಕೈಕಾರ ಹಾಗೂ ಸುಶ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಕ್ಲಬ್ ವತಿಯಿಂದ ಮನೋರಂಜನಾ ಕಾರ್ಯಕ್ರಮ ನಡೆಸಲಾಯಿತು.
14 ಶಿಕ್ಷಕರಿಗೆ ಸನ್ಮಾನ..
ಮುಖ್ಯ ಶಿಕ್ಷಕರು, ಶಿಕ್ಷಕರು, ಸಾಹಿತಿ, ಕಲೆ, ಕ್ರೀಡೆ ಹೀಗೆ ಶಿಕ್ಷಣ ರಂಗದಲ್ಲಿ ಗುರುತಿಸಿಕೊಂಡ ಶಿಕ್ಷಕರಾದ ಜಲಜ, ತನುಜ ಝೇವಿಯರ್, ಜೆಸ್ಸಿ ಪಿ.ವಿ, ಫ್ಲಾವಿಯ ಅಲ್ಬುಕರ್ಕ್, ಐವಿ ಗ್ರೆಟ್ಟಾ ಪಾಯಿಸ್, ಕೆ.ಶಿವಾನಂದ ಶೆಣೈ, ಪ್ರವೀಣ್ ವರ್ಣಕುಟೀರ, ಶ್ಯಾಮಲಾ ಶೆಟ್ಟಿ, ರಾಮಕೃಷ್ಣ ಪಡುಮಲೆ, ಶಾಲಿನಿ ಶೆಟ್ಟಿ, ನಾರಾಯಣ ಉಪ್ಪಳಿಗೆ, ರಮೇಶ್ ಶಿರ್ಲಾಲು, ವಸಂತ ಮೂಲ್ಯ, ಜಾನೆಟ್ ಡಿ’ಸೋಜರವರುಗಳನ್ನು ಅಭಿನಂದಿಸಲಾಯಿತು.










