ಪುಂಜಾಲಕಟ್ಟೆ: ಯಕ್ಷದ್ರುವ ಪಟ್ಲ ಪೌಂಡೇಶನ್’ ಪುಂಜಾಲಕಟ್ಟೆ ಘಟಕ ಇದರ ಮಹಿಳಾ ಘಟಕದ ಮಹಾಸಭೆಯು ಸೆ.12ರಂದು ಶ್ರೀ ಮುರುಘೆಂದ್ರ ಮಿತ್ರ ಮಂಡಳಿ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಉಮಾ ಡಿ ಗೌಡ , ಗೌರವ ಅಧ್ಯಕ್ಷೆಯಾಗಿ ಲಕ್ಷ್ಮಿ ಸಂಜೀವಶೆಟ್ಟಿ ಮುಗೆರೊಡಿ ಪುನರಾಯ್ಕೆಗೊಂಡರು. ಗೌರವ ಸಲಹೆಗಾರರಾಗಿ ತುಳಸಿ ಹಾರಬೆ ಆಯ್ಕೆಯಾದರು. ಸಂಚಾಲಕರಾಗಿ ಆಶಾ ದಿನಕರ ಶೆಟ್ಟಿ, ಸಹ ಸಂಚಾಲಕರಾಗಿ ರೇಖಾ ಎ ಶೆಟ್ಟಿ, ಉಪಾಧ್ಯಕ್ಷರಾಗಿ ಬಬಿತ ದಿನೇಶ್ ಪೂಜಾರಿ ಮತ್ತು ವಿನುತ ಉದಯ ಕುಮಾರ್ ಶೆಟ್ಟಿ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯ ಮಹಾಬಲ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶಶಿಕಲಾ ಗೋಪಾಲ ಪೂಜಾರಿ, ಕೋಶಾಧಿಕಾರಿಯಾಗಿ ಪುಷ್ಪ ವಸಂತ್ ಶೆಟ್ಟಿ ಆಯ್ಕೆಗೊಂಡರು.
ರೇಖಾ ಎ ಶೆಟ್ಟಿ ಸ್ವಾಗತಿಸಿ, ಶೋಭಾ ವಿಜಯಶೆಟ್ಟಿ ವಂದಿಸಿದರು.