ನೆಲ್ಯಾಡಿ: 2021-22ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ನೆಲ್ಯಾಡಿ ಸಂತಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಓರ್ವ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ ಉತ್ತೀರ್ಣಗೊಂಡಿದ್ದು ಸಂಸ್ಥೆಗೆ ಈಗ ಶೇ.100 ಫಲಿತಾಂಶ ಬಂದಿದೆ. ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾಗಿದ್ದ 56 ವಿದ್ಯಾರ್ಥಿಗಳ ಪೈಕಿ 55 ವಿದ್ಯಾರ್ಥಿಗಳು ತೇರ್ಗಡೆಗೊಂಡು ಸಂಸ್ಥೆಗೆ ಶೇ.98.20 ತೇರ್ಗಡೆ ಫಲಿತಾಂಶ ಬಂದಿತ್ತು. ಈ ಪೈಕಿ ವಿನೀಶ್ ಪಿ.ಪಿ. ಸಮಾಜ ವಿಜ್ಞಾನದಲ್ಲಿ 33 ಅಂಕ ಪಡೆದುಕೊಂಡು ಅನುತ್ತೀರ್ಣಗೊಂಡಿದ್ದರು. ಇದೀಗ ಅವರಿಗೆ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 10 ಅಂಕಗಳು ಲಭಿಸಿದ್ದು ಈಗ ಒಟ್ಟು 43 ಅಂಕ ಪಡೆದುಕೊಂಡು ತೇರ್ಗಡೆಯಾಗಿದ್ದಾರೆ. ಈ ಮೂಲಕ ಸಂಸ್ಥೆಯಿAದ ಪರೀಕ್ಷೆಗೆ ಹಾಜರಾದ ಎಲ್ಲಾ 56 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ.100 ಫಲಿತಾಂಶ ಬಂದಿದೆ. 13 ವಿದ್ಯಾರ್ಥಿಗಳು ಎ+, 15 ವಿದ್ಯಾರ್ಥಿಗಳು ಎ, 13 ವಿದ್ಯಾರ್ಥಿಗಳು ಬಿ+, 10 ವಿದ್ಯಾರ್ಥಿಗಳು ಬಿ ಹಾಗೂ 6 ವಿದ್ಯಾರ್ಥಿಗಳು ಸಿ+ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಸತತ 7ನೇ ವರ್ಷವೂ ಶೇ.100 ಫಲಿತಾಂಶ
ಕಳೆದ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂತಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲಾ ವಿಭಾಗದಲ್ಲಿ ಸಮಾಜ ವಿಜ್ಞಾನದಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಯೋರ್ವ ಮರು ಮೌಲ್ಯಮಾಪನದಲ್ಲಿ 10 ಹೆಚ್ಚುವರಿ ಅಂಕ ಪಡೆದುಕೊಂಡು ತೇರ್ಗಡೆಯಾಗಿದ್ದಾರೆ. ಈ ಮೂಲಕ ಆಂಗ್ಲಮಾಧ್ಯಮ ವಿಭಾಗಕ್ಕೆ ಈ ವರ್ಷವೂ ಶೇ.100 -ಲಿತಾಂಶ ಬಂದಿದೆ. ಆಂಗ್ಲಮಾಧ್ಯಮ ವಿಭಾಗವು ಸತತ 7 ವರ್ಷಗಳಿಂದ 100 ಶೇ.-ಲಿತಾಂಶ ಪಡೆದ ಸಾಧನೆ ಮಾಡಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ.
-ಅಬ್ರಹಾಂ ವರ್ಗೀಸ್ ಸಂಚಾಲಕರು
ಸಂತಜಾರ್ಜ್ ವಿದ್ಯಾಸಂಸ್ಥೆಗಳು, ನೆಲ್ಯಾಡಿ