ನೆಹರುನಗರ: ಕಾಲೇಜು ಆವರಣದ ಹೊರಗೆ ವಿದ್ಯಾರ್ಥಿಗಳ ಹೊಡೆದಾಟ-ದೂರು

0

ಪುತ್ತೂರು:ನೆಹರೂನಗರದಲ್ಲಿ ಎರಡು ಕಾಲೇಜು ವಿದ್ಯಾರ್ಥಿಗಳ ನಡುವೆ ಕಾಲೇಜಿನ ಕ್ಯಾಂಪಸ್ ಹೊರಗಡೆ ಹೊಡೆದಾಟ ನಡೆದ ಘಟನೆ ಜೂ.8ರಂದು ನಡೆದಿದೆ.

ಹಿಂದು ವಿದ್ಯಾರ್ಥಿನಿ ಜೊತೆ ಅನ್ಯಕೋಮಿನ ಡಿಪ್ಲೊಮಾ ವಿದ್ಯಾರ್ಥಿಯೊಬ್ಬರು ಮಾತನಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯ ಮನೆಯ ಮುಂಭಾಗದಲ್ಲೇ ಅನ್ಯಕೋಮಿನ ವಿದ್ಯಾರ್ಥಿಗೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ. ಘಟನೆ ಕುರಿತು ವಿದ್ಯಾರ್ಥಿಗಳು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇತ್ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here