ಪಟ್ಟೆ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

0

ಬಡಗನ್ನೂರುಃ  ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸಂತ ಫಿಲೋಮಿನಾ ದರ್ಬೆ, ಪುತ್ತೂರು,ಇದರ ವಾರ್ಷಿಕ ವಿಶೇಷ ಶಿಬಿರ 2022-2023 ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕಾಲ ಯುವಜನತೆ ಎಂಬ ಶಿರೋನಾಮೆಯಲ್ಲಿ“ಯುವ ಶಕ್ತಿ ರಾಷ್ಟ್ರಶಕ್ತಿ” ಎಂಬ ಘೋಷಣೆಯೊಂದಿಗೆ ಎ.9-04-2023 ರಿಂದ 15-04-2023ರ ವರೆಗೆ ನಡೆಯಲಿದ್ದು ಎ.9ರಂದು ಪಟ್ಟೆ ವಿದ್ಯಾಸಂಸ್ಥೆಯಲ್ಲಿ ಉದ್ಘಾಟನೆಗೊಂಡು ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.

ಕಾರ್ಯಕ್ರಮವನ್ನು ಪಟ್ಟೆವಿದ್ಯಾಸಂಸ್ಥೆಗಳ  ಸಂಚಾಲಕ  ಪಿ ನಾರಾಯಣ ಭಟ್ ಪಟ್ಟೆ  ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ  ಪಿ. ವೇಣುಗೋಪಾಲ್ ಪಟ್ಟೆ ಮಾತನಾಡಿ, ಸಂತ ಫಿಲೋಮಿನಾ ಕಾಲೇಜಿಗೂ  ಪಟ್ಟೆ ವಿದ್ಯಾಸಂಸ್ಥೆಗೂ ಅವಿನಾಭಾವ ಸಂಬಂಧ ಹೊಂದಿದೆ.ನಮ್ಮ ಇಡೀ ಕುಟುಂಬ ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ, ರಾಷ್ಟ್ರೀಯ ಸೇವಾ ಯೋಜನೆ 1969 ರಲ್ಲಿ  ಹುಟ್ಟು ಹಾಕಿ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ತರಭೇತಿ ನೀಡಿ  ಸಮಾಜಮುಖಿ ಕಾರ್ಯದತ್ತ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಅವಕಾಶ ಮಾಡಿಕೊಟ್ಟಿದೆ. ಒಂದು ವಾರಗಳ ನಡೆಯುವ ಶಿಬಿರಕ್ಕೆ  ಸಹ ಸಂಸ್ಥೆಗಳು ಕೈಜೋಡಿಸಿ ಸಹಕಾರ ನೀಡುತ್ತಿದೆ ಮುಂದೆ ನಮ್ಮ ಎರಡು ಸಂಸ್ಥೆಗಳು ಪ್ರೀತಿ ಮತ್ತು ಸಹಕಾರ ಬೆಳೆಸಲಿ ಎಂದು ಹೇಳಿ ಶುಭ ಹಾರೈಸಿದರು.. 

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಲೋಕೇಶ್ ಎಸ್ ಆರ್   ಮಾತನಾಡಿ , ದೇಶದ ಭವಿಷ್ಯ ಯುವಜನತೆ ಮೇಲಿದೆ. ದೇಶ ನಮಗೆ ಏನೂ ಕೊಡುತ್ತದೆ ಎಂಬುದಕ್ಕಿಂತ ದೇಶಕ್ಕೆ ನಾವೇನು ಕೊಡುಗೆ ನೀಡಬಹುದು ಎಂಬ ಚಿಂತನೆ ಮಾಡಬೇಕು. ಜೀವನದಲ್ಲಿ  ನಂಬಿಕೆ ಮಹತ್ವವಾಗಿದೆ. ಅಚಲವಾದ ನಂಬಿಕೆಯಿಂದ ಯಾವುದೇ ಗುರಿ ಸಾಧಿಸಲು ಸಾಧ್ಯ ಜೀವದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ಇದು ಉತ್ತಮ ಸದಾವಕಾಶ , ಹೆಚ್ಚು ಹೆಚ್ಚು  ಪುಸ್ತಕ ಓದಿ .ಒಂದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಪಡೆದು ಉತ್ತಮ ನಾಗರಿಕರಾಗಿ ಬಾಳುವಂತೆ ಹಾರೈಸಿದರು.

ಪುತ್ತೂರು  ಸಂತ ಫಿಲೋಮಿನಾ ಕಾಲೇಜು  ಪ್ರಾಂಶುಪಾಲರಾದ  ವಂ। ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಶಿಕ್ಷಣ ಮತ್ತು ಸೇವೆ ಒಟ್ಟಾಗಿ ಅಭ್ಯಾಸ ಮಾಡುವ ಉದ್ದೇಶ, ನಮ್ಮಲ್ಲಿ ಧರ್ಮಗುರುಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಇದ್ದಾರೆ  ಇವರು ತಿಳಿದು ಕೊಳ್ಳಬೇಕಾದ ಬಹುಮುಖ್ಯ ಅಂಶ ಅಂದರೆ  ಎಲ್ಲರೂ ಮನುಷ್ಯರಾದಗ ಮಾತ್ರ ಶಿಕ್ಷಣ ಸಂಪೂರ್ಣತೆ ಪಡೆಯಲು ಸಾಧ್ಯ. ನಾವು ಬೇರೆ ಬೇರೆ ಹಿನ್ನೆಲೆಯಿಂದ ಬಂದವರು, ಬೇರೆ ಬೇರೆ ಶಿಕ್ಷಣ ಪಡೆದರು, ಬೇರೆ ಬೇರೆ ಅಧಿಕಾರ ಹೊಂದಿದವರಾದ ನಾವು ಮೂಲತ ಮನುಷ್ಯರಾಗಬೇಕು. ಹಳ್ಳಿಯ ಬದುಕು ಮತ್ತು ಒಳ್ಳೆಯ ಮೂಲಾಧರಿತ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬಂದವರು ಎಂಬ ನೆನಪು ನಮ್ದದಾಗಿಬೇಕು. ಎಂದು ಹೇಳಿದರು.

 ವೇದಿಕೆಯಿಂದ  ಪಟ್ಟೆ ವಿದ್ಯಾಸಂಸ್ಥೆಗಳ   ನಿರ್ದೇಶಕ ಶಿವಪ್ರಸಾದ್  ಪಟ್ಟೆ ,  ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಎಸ್. ಡಿ.ಯಂ.ಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ,  ಪಟ್ಟೆ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ, ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿಕ್ಷಕಿ ಪುಷ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಟ್ಟೆ ವಿದ್ಯಾಸಂಸ್ಥೆಗಳ  ನಿರ್ದೇಶಕ ನಹುಷ , ನಿವೃತ್ತ ಮುಖ್ಯ ಶಿಕ್ಷಕಿ ಯಮೂನ ವೈಕೆ  ಹಾಗೂ ಶಿಕ್ಷಕ ವರ್ಗದವರು,ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. 

 ಶಿಬಿರಾಧಿಕಾರಿ ವಾಸುದೇವ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ರಾಶಿ ರೈ ವಂದಿಸಿದರು, ದಿನಕರ ಕಾರ್ಯಕ್ರಮ  ನಿರೂಪಿಸಿದರು.  ಶಿಕ್ಷಕಿಯಾರದ ಧನ್ಯ ಹಾಗೂ ಚೈತ್ರ ಸಹಕರಿಸಿದರು .

LEAVE A REPLY

Please enter your comment!
Please enter your name here