ಬಲ್ನಾಡು ಉಳ್ಳಾಲ್ತಿ ದೈವಸ್ಥಾನದಲ್ಲಿ ಕಿರುವಾಳು ಆಗಮನ, ವರ್ಷಾವಧಿ ನೇಮ, ನಡಾವಳಿಯ ಭಕ್ತಾದಿಗಳ ಸಭೆ

0

.16ರಂದು ಬೆಳಿಗ್ಗೆಯಿಂದಲೇ ಮಲ್ಲಿಗೆ ಅರ್ಪಿಸಲು ಅವಕಾಶ- ವರ್ಷಾವಧಿ ನೇಮೋತ್ಸವದಲ್ಲಿ ಬದಲಾವಣೆ

ಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಬಲ್ನಾಡಿನಿಂದ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ ಮತ್ತು ವರ್ಷಾವಧಿ ನೇಮ ನಡಾವಳಿಯ ಅಂಗವಾಗಿ ಗ್ರಾಮದ ಭಕ್ತಾದಿಗಳ ಸಭೆಯು ಎ.9ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲರವರ ಅಧ್ಯಕ್ಷತೆಯಲ್ಲಿ ದೈವಸ್ಥಾನದ ಸಭಾಂಗಣದಲ್ಲಿ ನೆರವೇರಿತು.


ಎ.16 ರಂದು ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಭಂಡಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದು ಅದೇ ದಿನ ಬೆಳಿಗ್ಗೆಯಿಂದಲೇ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಹಾಗೂ ಅಪರಾಹ್ನ 3 ಗಂಟೆಯಿಂದ 5 ರತನಕ ಪ್ರಸಾದ ವಿತರಣೆ ನಡೆಯಲಿದ್ದು ಭಕ್ತಾದಿಗಳು ದೈವಗಳಿಗೆ ಹರಕೆ, ಮಲ್ಲಿಗೆ ಅರ್ಪಿಸಿ ಪ್ರಸಾದ ಪಡೆದುಕೊಳ್ಳಬಹುದಾಗಿದೆ. ಸಂಜೆ 6 ಗಂಟೆಗೆ ದೈವಸ್ಥಾನದಿಂದ ದೈವಗಳ ಕಿರುವಾಳು ಭಂಡಾರವು ಹೊರಡಲಿದೆ. ಭಂಡಾರವು ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಅಲ್ಲಿಯೂ ಪ್ರಸಾದ ವಿತರಣೆಗೆ ದೈವಸ್ಥಾನದ ವತಿಯಿಂದಲೇ ಉಳ್ಳಾಲ್ತಿ ದೈವದ ಪ್ರಸಾದ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತೀರ್ಮಾಣಿಸಲಾಯಿತು.


ವರ್ಷಾವಧಿ ನೇಮೋತ್ಸವದಲ್ಲಿ ಬದಲಾವಣೆ:
ಪ್ರತಿ ವರ್ಷ ನೇಮೋತ್ಸವದ ಹಿಂದಿನ ದಿನ ಅಂದರೆ ಎ.27ರಂದು ರಾತ್ರಿ ದೈವಗಳ ಭಂಡಾರ ತೆಗೆದು, ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ ಅನ್ನಸಂತರ್ಪಣೆ ನಡೆದ ನಂತರ ದೈವಗಳಿಗೆ ತಂಬಿಲ ಸೇವೆಗಳು ನಡೆಯುತ್ತಿದ್ದವು. ಆದರೆ ಈ ವರ್ಷದಿಂದ ತಂತ್ರಿಗಳ ಮಾರ್ಗದರ್ಶನದಂತೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಎ.27ರಂದು ಸಂಜೆ 7 ಗಂಟೆಗೆ ದೈವಗಳ ಭಂಡಾರ ತೆಗೆದು, ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ 9 ಗಂಟೆಗೆ ದೈವಗಳಿಗೆ ತಂಬಿಲ ಸೇವೆ, 9.30ಕ್ಕೆ ಪಲ್ಲ ಪೂಜೆ ನಡೆದು ಕೊನೆಯಲ್ಲಿ ಅನ್ನಸಂತರ್ಪಣೆ ನಡೆಸಲಾಗುವುದು. ಇದಕ್ಕೆ ಪೂರಕವಾಗಿ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಮಾಹಿತಿ ನೀಡಲಾಗಿದೆ ಎಂದು ಅಧ್ಯಕ್ಷ ಮಾಧವ ಗೌಡ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಸಭೆಯು ಸಹಮತ ಸೂಚಿಸಿತು. ಎ.28ರಂದು ಪೂರ್ವಾಹ್ನ 6 ಗಂಟೆಗೆ ದಂಡನಾಯಕ ದೈವದ ವಾಲಸರಿ ನೇಮ, ಉಳ್ಳಾಲ್ತಿ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಪರಾಹ್ನ ಕಾಳರಾಹು ಹಾಗೂ ಮಲರಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ಮಾಧವ ಗೌಡ ತಿಳಿಸಿದರು.


ಕಿರುವಾಳು ಆಗಮನದ ಸಂದರ್ಭದಲ್ಲಿ ಪರಿಚಾರಕರು, ಸ್ವಯಂ ಸೇವಕರಿಗೆ ಮಾರ್ಗದರ್ಶನಗಳನ್ನು ನೀಡಲಾಯಿತು. ವರ್ಷಾವಧಿ ನೇಮೋತ್ಸವಕ್ಕೆ ಪೂರಕವಾಗಿ ಚಪ್ಪರ ಸಮಿತಿ, ಪಾಕಶಾಲೆ, ಸುಚಿತ್, ಅನ್ನಸಂತರ್ಪಣೆ ಮೊದಲಾದ ಉಪ ಸಮಿತಿಗಳಿಗೆ ಸಂಚಾಲಕರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.


ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿರಣ್ ಕುಮಾರ್ ರೈ, ಭೋಜರಾಜ ಗೌಡ, ಶ್ಯಾಮಣ್ಣ ನಾಯಕ್, ನಾರಾಯಣ ಪೂಜಾರಿ, ಅಶೋಕ್ ಕುಮಾರ್, ಹರಿಣಿ ಪದವು, ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಚಿದಾನಂದ ಬೈಲಾಡಿ, ಆನಂದ ಸುವರ್ಣ, ಬಲ್ನಾಡು ಗ್ರಾ.ಪಂ ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ನಾರಾಯಣ ಪಾಟಾಳಿ, ಅಚ್ಚುತ್ತ, ವೆಂಕಟಕೃಷ್ಣ ಪಾಳೆಚ್ಚಾರು, ಕ್ಷೇತ್ರ ಪರಿಚಾರಕರು ಸೇರಿದಂತೆ ಹಲವು ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here