ನೈಸರ್ಗಿಕ ಸಂಪನ್ಮೂಲ ಬಳಸಿ ಉದ್ಯಮಶೀಲರಾಗಿ- ಸತೀಶ್ ಮಾಬೆನ್
ಪುತ್ತೂರು: ಉದ್ಯೋಕಾಂಕ್ಷಿಗಳಿಗೆ ಮತ್ತು ಸ್ವಂತ ಉದ್ಯಮ ಮಾಡುವವರಿಗಾಗಿ ಉದ್ಯಮಶೀಲತೆ, ಅಭಿವೃದ್ಧಿ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ ಎಪಿಎಂಸಿ ರಸ್ತೆ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿರುವ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು. ಡಾ. ಪಿ.ಕೆ.ಎಸ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆ ದ.ಕ.ಜಿಲ್ಲೆಯ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಮಾಹಿತಿ ನೀಡಿ ದೇಶದ ದೊಡ್ಡ ಉದ್ದಿಮೆದಾರರಾದ ಅಂಬಾನಿ, ಟಾಟಾ, ಅಜಿಂ ಪ್ರೇಮ್ಜಿರವರಂತೆ ನಾವು ಕೂಡ ಉದ್ಯಮದ ಕನಸು ಕಾಣಬೇಕು. ಇದಕ್ಕೆ ಒಳ್ಳೆಯ ಮನಸ್ಸು ಕೂಡ ನಾವು ಹೊಂದಿರಬೇಕು ಎಂದರು. ನಮ್ಮ ದೇಶದಲ್ಲಿ ನೈಸರ್ಗಿಕ ಹಾಗೂ ಇತರ ಸಂಪನ್ಮೂಲಗಳು ಅಗಾಧವಾಗಿದೆ. ನಮ್ಮ ದೇಶದಲ್ಲಿರುವ ಸಂಪನ್ಮೂಲಗಳು ಬೇರೆ ಯಾವ ದೇಶದಲ್ಲಿಯೂ ಇಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿಯೂ ನಮ್ಮಲ್ಲಿ ಹಲವಾರು ಪದವಿಗಳಿವೆ. ಭಾರತ ದೇಶದಲ್ಲಿ ಹುಟ್ಟಿದ ಅನೇಕರು ವಿದೇಶದಲ್ಲಿ ದೊಡ್ಡ ಉದ್ದಿಮೆದಾರರು, ಉದ್ಯೋಗಿಗಳು ಆಗಿದ್ದಾರೆ. ನಮಗೆ ವಿದೇಶಿ ವ್ಯಾಮೋಹ ಜಾಸ್ತಿಯಾಗಿದೆ. ವಿದೇಶಿ ಉತ್ಪನ್ನಗಳ ಬಳಕೆ ಬೇಡ. ಸ್ವದೇಶೀ ಉತ್ಪನ್ನಗಳನ್ನು ತಯಾರಿಸಿ ಇದರಿಂದ ನಾವೇ ಶ್ರೀಮಂತರಾಗೋಣ. ಯಶಸ್ವಿ ಉದ್ಯಮಿಗಳು ಕಷ್ಟವನ್ನು ಎದುರಿಸಿ ಬಂದವರೇ ಆಗಿದ್ದಾರೆ. ನಾವೆಲ್ಲರೂ ಉದ್ಯಮಶೀಲತಾ ಗುಣಗಳನ್ನು ಬೆಳೆಸಿಕೊಳ್ಳೋಣ ಎಂದರು.
ಗ್ಲೋಬಲ್ ಇನ್ಸ್ಟಿಟ್ಯೂಟ್ ಫಾರ್ ಎಜುಕೇಶನ್ ಆಂಡ್ ರೀಸರ್ಚ್ ಫೌಂಡೇಶನ್ನ ಆಶಿಷ್ರವರು ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಇಲಾಖೆಗಳ ಸಚಿವಾಲಯ(MSME)ದ ಅಡಿಯಲ್ಲಿ ನಡೆಯುತ್ತಿರುವ ZED ಪ್ರಮಾಣಪತ್ರದ ಮಾಹಿತಿ ನೀಡಿದರು. ಉಮೇಶ್ ರೈ ಕೈಕಾರರವರು ಸೋಲಾರ್ ಗ್ರಿಡ್ ಮಾಹಿತಿ ನೀಡಿದರು. ಉದ್ಯಮಶೀಲತಾ ತರಬೇತಿ ಪಡೆದು ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ಗುತ್ತಿಗಾರಿನ ಚೇತನ್ ಮತ್ತು ಅನುಷಾ ದಂಪತಿಯವರು ಅನಿಸಿಕೆ ತಿಳಿಸಿದರು. ಪುತ್ತೂರು ತಾಲೂಕು ಪಂಚಾಯತ್ನ ಜಗತ್, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಉದ್ಯಮಶೀಲತಾ ತರಬೇತಿಯ ಸರ್ಟಿಫಿಕೇಟ್ ನೀಡಲಾಯಿತು.
ಝಾಹಿರ್ ಉಪ್ಪಿನಂಗಡಿ, ಶಶಿಕಲಾ ಸಂಪ್ಯ, ರಮೇಶ್ ಈಶ್ವರಮಂಗಲ, ಅನಂತ್, ಛಾಯಾ ಪುತ್ತೂರು, ಶಂಕರ್ ಭಟ್ ಕಬಕ, ಮಿಥುನ್ ನೆಹರೂನಗರ, ಉಮಾರುಲ್ ಫಾರೂಕ್, ಹರೀಶ್, ಜ್ಯೋತಿಲಕ್ಷ್ಮೀ ಪಿ. ರಾಮಕುಂಜ, ಸಾವಿತ್ರಿ ಬೆಳ್ತಂಗಡಿ, ಸಾಹಿದಾ ಬೇಗಂ ಬೆಳ್ತಂಗಡಿ, ನಸೀಮ ಬೆಳ್ತಂಗಡಿ, ಹರ್ಷಿಯ ಬೆಳ್ತಂಗಡಿ, ಮೆಲ್ವಿನ್ ಪುತ್ತೂರು, ರೋಷನ್ ಡಿಸೋಜ ಕಿನ್ನಿಗೋಳಿ, ಕಿಶನ್ ನೆಹರುನಗರ, ಅಶೋಕ್ ನೆಕ್ಕಿಲಾಡಿ, ಸುಷ್ಮಿತಾ ಕೊಡಿಪ್ಪಾಡಿ, ಸುಮಿತ್ರಾ ಕೊಳ್ತಿಗೆ, ಲಲಿತ ಸುಬ್ರಹ್ಮಣ್ಯ, ಕೆ.ಬಾಲಕೃಷ್ಣ ಕೊಳ್ತಿಗೆ, ದೀಕ್ಷಿತ್ ಹೆಗ್ಡೆ ಪುತ್ತೂರು, ಕೃಷಿ ಉದ್ಯೋಗ ಸಖಿಗಳಾದ ಸುಷ್ಮಿತಾ ಕೊಡಿಪ್ಪಾಡಿ, ಆಶಾಲತಾ ನಿಡ್ಪಳ್ಳಿ, ಪದ್ಮಿನಿ ಬಲ್ನಾಡು, ರಜನಿ ಕೆಯ್ಯೂರು, ಗಿರಿಜ ಕೆದಂಬಾಡಿ, ಚಂದ್ರಾವತಿ ಕಾಣಿಯೂರು, ಲಲಿತಾ ಚಂದ್ರಶೇಖರ್ ಸುಳ್ಯ, ಪುಷ್ಪಾವತಿ ಬನ್ನೂರು, ಅಬ್ದುಲ್ ಖಾದರ್ ಮುರ, ಸ್ವಸ್ತಿಕ್ ಮುಂಡೂರು, ರವಿರಾಜ್ ಸುಳ್ಯ, ಅಶ್ರಫ್ ವಕ್ಕಾಡಿ, ಗೋವಿಂದ್ ನಾಯಕ್ ಆರ್ಯಾಪು, ಅರುಣ್ ಕುಮಾರ್ ಹಾರಾಡಿ, ಗೋಪಾಲಕೃಷ್ಣ ಪಿ. ಬೆಟ್ಟಂಪಾಡಿ, ಭಾರತಿ ಟಿ. ಒಳಮೊಗ್ರು, ಹರಿಪ್ರಸಾದ್ ಬೊಳುವಾರು, ಲಲಿತ ಎಮ್. ಏನೆಕಲ್ಲು, ತುಳಸಿ ಏನೆಕಲ್ಲು, ಅನುರಾಧಾ ಬನ್ನೂರು, ತುಳಸಿ ಕೆ.ಎಸ್. ಕೋಡಿಂಬಾಡಿ, ಸುಮಿತ್ರಾ ಕೊಳ್ತಿಗೆ, ಅನಿತಾ ಕೊಳ್ತಿಗೆ, ವಿಶ್ವನಾಥ್ ಪುತ್ತೂರು, ವಿಕ್ಟರ್ ಮಾರ್ಟಿಸ್ ಕಡಬ, ಮಹೇಂದ್ರನ್ ಕಾವು, ಗುಲಾಬಿ ಬೆಳ್ಳಾರೆ, ವಿಕ್ಟರ್ ಮಾರ್ಟಿಸ್ ಕಡಬ, ಮಹೇಂದ್ರನ್ ಕಾವು, ಗುಲಾಬಿ, ಕರುಣಾಕರ ಶೆಟ್ಟಿ ಬೆಳ್ಳಾರೆ, ಅನ್ವರುದ್ದೀನ್ ಅಹಮದ್ ಊರಮಾಲ್, ಅಬ್ದುಲ್ ರಝಾಕ್ ಕೊಡಿಪ್ಪಾಡಿ, ರಾಕೇಶ್ ಮೂಡಬಿದ್ರೆರವರು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಸುದ್ದಿ ಸಿಬಂದಿಗಳಾದ ರಾಜೇಶ್ ಎಂ.ಎಸ್., ಶಿವಕುಮಾರ್ ಈಶ್ವರಮಂಗಲ, ಪ್ರಶಾಂತ್ ಮಿತ್ತಡ್ಕ, ಪ್ರಜ್ವಲ್ ಪುತ್ತೂರು, ಕುಶಾಲಪ್ಪ ಅಗಳಿ, ಹೊನ್ನಪ್ಪ ಗೌಡ, ಹರಿಣಾಕ್ಷಿ, ಚೈತ್ರ, ರಕ್ಷಾ ಸಹಕರಿಸಿದರು.