ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿ ನಿವಾಸಿ ದೈವ ನರ್ತಕ ಬೊಳಿಯ ಅಜಿಲ (52 ವ) ಹೃದಯಾಘಾತದಿಂದ ಫೆ.29ರಂದು ಸ್ವ ಗೃಹದಲ್ಲಿ ನಿಧನರಾದರು.
ಮೃತರು ಅನೇಕ ವರ್ಷಗಳಿಂದ ಮೊಡಪ್ಪಾಡಿ ಪರಿಸರದ ಅನೇಕ ಕಡೆಗಳಲ್ಲಿ ಜಠಾಧಾರಿ ದೈವದ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಮನೆಗೆ ಮೊಡಪ್ಪಾಡಿಗುತ್ತು ತರವಾಡು ಮನೆಯವರು ಅಲ್ಲದೆ ಅನೇಕ ಗಣ್ಯರು, ಗ್ರಾಮಸ್ಥರು, ಭೇಟಿ ನೀಡಿ ಸಂತಾಪ ಸೂಚಿಸಿದರು.