ಎವಿಜಿ ಶಾಲೆಯಲ್ಲಿ ಪೋಷಕರ ಸಭೆ

0

ದೇಹದಲ್ಲಿ ಕಣ್ಣು ಇದ್ದಂತೆ ಊರಿಗೊಂದು ಶಾಲೆ – ಗುಡ್ಡಪ್ಪ ಬಲ್ಯ

ಪುತ್ತೂರು: ನಮ್ಮ ದೇಹದಲ್ಲಿರುವ ಕಣ್ಣು ನಮಗೆ ಹೊರಗಿನ ದೃಶ್ಯವನ್ನು ಕಾಣುವ ಶಕ್ತಿ ಕೊಡುವಂತೆ ಊರಿನಲ್ಲಿರುವ ಶಾಲೆ ಆ ಊರಿಗೆ ವಿದ್ಯೆ ಎಂಬ ಬೆಳಕನ್ನು ಕೊಟ್ಟು ಪಥ ದರ್ಶನ ಮಾಡುತ್ತದೆ ಎಂದು ಪುತ್ತೂರು ಬನ್ನೂರಿನ ಎವಿಜಿ ಶಾಲೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಬಲ್ಯ ಹೇಳಿದರು.


ಅವರು ಕೃಷ್ಣ ನಗರದ ಬನ್ನೂರಿನ ಅಲುಂಬುಡದ ಎವಿಜಿ ಶಾಲೆಯಲ್ಲಿ ಎ.8 ರಂದು ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದರು. ಶಾಲೆಯು ಸರ್ವ ಜನಾಂಗದ ಶಾಂತಿಯ ತೋಟ. ಅಲ್ಲಿ ಧರ್ಮ, ಜಾತಿ ಭಾಷೆಯ ಭೇದ ಇಲ್ಲ ಎಂದು ಹೇಳಿದರು.


ಸಭೆಯಲ್ಲಿ ಸಂಸ್ಥೆಯ ಸಂಚಾಲಕ ಎ.ವಿ ನಾರಾಯಣರವರು ಮಾತನಾಡಿ ಶಾಲೆಯ ಪ್ರಗತಿಗೆ ಊರಿನವರ ಮತ್ತು ಪೋಷಕರ ಸಹಕಾರವನ್ನು ಕೋರಿದರು. ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ವನಿತಾ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಮಕ್ಕಳ ಪೋಷಕರು, ಶಿಕ್ಷಕರು ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಯಶುಭ ರೈ ಪ್ರಾರ್ಥಿಸಿದರು. ಶಿಕ್ಷಕಿ ರಂಜಿತಾ ರೈ ಸ್ವಾಗತಿಸಿದರು, ಸಂಹಿತ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಗೌಡ ಮಲುವೇಳು ಮಲುವೇಳು ವಂದಿಸಿದರು.

LEAVE A REPLY

Please enter your comment!
Please enter your name here